Udupi News: ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕರು; ವಿಡಿಯೋ ವೈರಲ್, ಪುಂಡರು ಪೊಲೀಸ್ ವಶಕ್ಕೆ
ರಸ್ತೆಯಲ್ಲಿ ಯುವಕರು ಅಡ್ಡಾದಿಡ್ಡಿ ಕಾರು ಚಲಾಯಿಸಿ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಘಟನೆ ಕಾಪು ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿತ್ತು, ಇದೀಗ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿ: ರಸ್ತೆಯಲ್ಲಿ ಯುವಕರು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಘಟನೆ ಕಾಪು(Kapu)ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ರಸ್ತೆ ನಡುವೆ, ಡಿವೈಡರ್ ಮೇಲೆಲ್ಲ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕರು, ಇಂತಹ ಅಪಾಯಕಾರಿ ಜಾಲಿ ರೈಡ್ ವೀಡಿಯೋವನ್ನ ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಪೊಲೀಸರು ಯುವಕರನ್ನ ವಶಕ್ಕೆ ಪಡೆದಿದ್ದಾರೆ, ಅಯಾನ್(24), ಮಿಶಾಲ್ ವುದ್ದೀನ್(23), ಶಾನೂನ್ ಡಿಸೋಜ(25), ವಿವೇಕ್ (23) ಅಪಾಯಕಾರಿ ಕಾರು ಚಲಾಯಿಸಿದ ಆರೋಪಿಗಳು. ಜೊತೆಗೆ ವಿಡಿಯೋದಲ್ಲಿದ್ದ ವಾಹನಗಳಾದ ಥಾರ್ ಜೀಪ್, ಕ್ರೆಟಾ, ಸ್ವಿಫ್ಟ್, ಫಾರ್ಚ್ಯೂನರ್ ಕಾರುಗಳನ್ನ ಸೀಜ್ ಮಾಡಿದ್ದಾರೆ. ಈ ಕುರಿತು ಕಾಪು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos