ಸಂಧ್ಯಾ ಜೊತೆ ಸರಳವಾಗಿ ವಿವಾಹ ಆದ ಉಗ್ರಂ ಮಂಜು; ಇಲ್ಲಿದೆ ವಿಡಿಯೋ

Updated on: Jan 23, 2026 | 11:51 AM

Ugram Manju Wedding video: ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಉಗ್ರಂ ಮಂಜು ಅವರು ಹಸೆಮಣೆ ಏರಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಉಗ್ರಂ ಮಂಜು ಅವರು ಸಂಧ್ಯಾ ಜೊತೆ ಹಸೆಮಣೆ ಏರಿದ್ದಾರೆ.

ನಟ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಉಗ್ರಂ ಮಂಜು ಅವರು ಇಂದು (ಜನವರಿ 2) ವಿವಾಹ ಆಗಿದ್ದಾರೆ. ಸಂಧ್ಯಾ ಜೊತೆ ಅವರು ಹಸೆಮಣೆ ಏರಿದ್ದಾರೆ. ಧರ್ಮಸ್ಥಳದಲ್ಲಿ ಸರಳ ವಿವಾಹ ಆಗಲು ಮಂಜು ನಿರ್ಧರಿಸಿದ್ದರು. ಅಂತೆಯೇ ಈ ಮದುವೆ ನಡೆದಿದೆ. ಆಪ್ತರು, ಗೆಳೆಯರು ಈ ಮದುವೆಗೆ ಆಗಮಿಸಿದ್ದರು. ಎಲ್ಲರೂ ಮಂಜುಗೆ ಶುಭಾಶಯ ಕೋರಿದ್ದಾರೆ. ನಟ ಪ್ರಮೋದ್ ಶೆಟ್ಟಿ ಕೂಡ ಮದುವೆಗೆ ಹಾಜರಿ ಹಾಕಿದ್ದರು. ವಿವಾಹಕ್ಕೂ ಮೊದಲು ಮಂಜು ಅವರು ಬಿಗ್ ಬಾಸ್ ಮನೆಗೆ ಬಂದು ಬ್ಯಾಚುಲರ್ಸ್ ಪಾರ್ಟಿ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.