ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ

|

Updated on: Jan 10, 2025 | 5:37 PM

ನಟ ಉಗ್ರಂ ಮಂಜು ಅವರು ಸ್ಟ್ರಾಂಗ್ ಸ್ಪರ್ಧಿ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಅವರು ಆಟದ ಕಡೆಗೆ ಸರಿಯಾಗಿ ಗಮನ ಹರಿಸುತ್ತಿಲ್ಲ. ಅದರಿಂದಾಗಿ ಅವರಿಗೆ ಈ ವಾರ ಕಳಪೆ ಹಣೆಪಟ್ಟಿ ನೀಡಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಫಿನಾಲೆ ಇನ್ನೇನು ಸಮೀಪಿಸಲಿದೆ ಎನ್ನುವಾಗ ಉಗ್ರಂ ಮಂಜು ಅವರಿಗೆ ಹಿನ್ನಡೆ ಆಗಿದೆ.

ಬಿಗ್ ಬಾಸ್​ ಮನೆಯಲ್ಲಿ ಉಗ್ರಂ ಮಂಜು ಅವರನ್ನು ಗೆಲ್ಲುವ ಸಾಮರ್ಥ್ಯ ಇರುವ ಸ್ಪರ್ಧಿ ಎಂದು ಅನೇಕರು ಭಾವಿಸಿದ್ದರು. ಆದರೆ ಮೂರು ಹೊತ್ತು ಗೌತಮಿಯ ಸಹವಾಸ ಮಾಡಿದ್ದಕ್ಕೆ ಈಗ ಉಗ್ರಂ ಮಂಜುಗೆ ಕಳಪೆ ಪಟ್ಟ ಸಿಕ್ಕಿದೆ. ಫಿನಾಲೆಗೇ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಅವರು ಜೈಲು ಸೇರುವಂತಾಗಿದೆ. ಉಗ್ರಂ ಮಂಜು ಮೊದಲಿನಂತಿಲ್ಲ ಎಂದು ಅನೇಕ ಬಾರಿ ಇತರೆ ಸ್ಪರ್ಧಿಗಳು ಎಚ್ಚರಿಕೆ ನೀಡಿದ್ದರೂ ಕೂಡ ಅವರು ಎಚ್ಚೆತ್ತುಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.