150 ರೂಪಾಯಿಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್ನಿಂದ ಸಿಕ್ತು ದೊಡ್ಡ ಸಂಭಾವನೆ
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಫಿನಾಲೆ ತಲುಪಿದ್ದ ಉಗ್ರಂ ಮಂಜು ಅವರು 4ನೇ ರನ್ನರ್ ಅಪ್ ಆದರು. ಟ್ರೋಫಿ ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ. 119 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ನೀಡಿದ ಅವರಿಗೆ ‘ಕಲರ್ಸ್ ಕನ್ನಡ’ದಿಂದ ದೊಡ್ಡ ಸಂಭಾವನೆಯೇ ಸಿಕ್ಕಿರುತ್ತದೆ. ಆ ಕುರಿತು ಪ್ರಶ್ನೆ ಕೇಳಲಾಗಿದೆ.
ನಟ ಉಗ್ರಂ ಮಂಜು ಅವರು ಅಂದಾಜು 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಲನ್ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಆರಂಭದ ದಿನಗಳಲ್ಲಿ ಅವರು 150 ರೂಪಾಯಿಗೆ ಕೂಡ ಕೆಲಸ ಮಾಡಿದ್ದರು. ನಂತರ ಸಂಭಾವನೆ ಹೆಚ್ಚುತ್ತಾ ಹೋಯಿತು. ಬಿಗ್ ಬಾಸ್ ಶೋನಿಂದ ಅವರಿಗೆ ಉತ್ತಮ ಸಂಭಾವನೆ ಸಿಕ್ಕಿದೆ. ಆದರೆ ಈ ಸಂಖ್ಯೆಯನ್ನು ಬಹಿರಂಗ ಮಾಡಲು ಅವರಿಗೆ ಇಷ್ಟ ಇಲ್ಲ. ಹಾಗಾಗಿ ಸಂಭಾವನೆ ಕುರಿತ ಪ್ರಶ್ನೆಗೆ ಉಗ್ರಂ ಮಂಜು ಉತ್ತರ ನೀಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 28, 2025 03:01 PM
Latest Videos