ಉಕ್ಕಿ ಹರಿಯುತ್ತಿರುವ ತುಂಗಭದ್ರಾ, ಉಕ್ಕಡಗಾತ್ರಿ ಪುಣ್ಯಕ್ಷೇತ್ರ ಜಲಾವೃತ

Edited By:

Updated on: Jul 16, 2022 | 12:37 PM

ನದಿ ಉಕ್ಕಿ ಹರಿಯುತ್ತಿರುವುದರಿಂದ ದಾವಣಗೆರೆ ಜಿಲ್ಲೆಯಲ್ಲಿರುವ ಉಕ್ಕಡಗಾತ್ರಿ ಪುಣ್ಯಕ್ಷೇತ್ರ ಜಲಾವೃತಗೊಂಡಿದೆ. ಕ್ಷೇತ್ರದ ಸ್ನಾನಘಟ್ಟ ಪ್ರದೇಶಕ್ಕೆ ನೀರು ನುಗ್ಗಿರುವುದನ್ನು ವಿಡಿಯೋನಲ್ಲಿ ಕಾಣಬಹುದು.

ದಾವಣಗೆರೆ: ತುಂಗಭದ್ರಾ (Tungabhadra) ನದಿಪಾತ್ರದಲ್ಲಿರುವ ಗ್ರಾಮಗಳ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ನದಿ ಉಕ್ಕಿ ಹರಿಯುತ್ತಿರುವುದರಿಂದ ದಾವಣಗೆರೆ ಜಿಲ್ಲೆಯಲ್ಲಿರುವ ಉಕ್ಕಡಗಾತ್ರಿ (Ukkadagathri) ಪುಣ್ಯಕ್ಷೇತ್ರ ಜಲಾವೃತಗೊಂಡಿದೆ (submerged). ಕ್ಷೇತ್ರದ ಸ್ನಾನಘಟ್ಟ ಪ್ರದೇಶಕ್ಕೆ ನೀರು ನುಗ್ಗಿರುವುದನ್ನು ವಿಡಿಯೋನಲ್ಲಿ ಕಾಣಬಹುದು. ಅದರ ಸುತ್ತಮುತ್ತಲಿನ ಅಂಗಡಿಗಳು ನೀರಲ್ಲಿ ಮುಳುಗಿವೆ. ಟಿವಿ9 ಕನ್ನಡ ವಾಹಿನಿಯ ಬಸವರಾಜ್ ದೊಡ್ಮನಿ ಸ್ಥಳೀಯರೊಂದಿಗೆ ಮಾತಾಡಿದ್ದಾರೆ.

Published on: Jul 16, 2022 11:57 AM