ಹಾಸನ: ರಸ್ತೆ ಮಧ್ಯೆ ನಿಂತ ಪೊಲೀಸ್ ಬೆಂಗಾಲು ವಾಹನ; ಗರಂ ಆದ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ

ಹಾಸನ: ರಸ್ತೆ ಮಧ್ಯೆ ನಿಂತ ಪೊಲೀಸ್ ಬೆಂಗಾಲು ವಾಹನ; ಗರಂ ಆದ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ

ಮಂಜುನಾಥ ಕೆಬಿ
| Updated By: Rakesh Nayak Manchi

Updated on: Jan 08, 2024 | 4:42 PM

ಬೆಂಗಾಲು ವಾಹನದ ಪೊಲೀಸರ ಮೇಲೆ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಗುರಂ ಆದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಳೇಕೋಟೆ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಕೇಂದ್ರ ಸಚಿವರು, ಹರದನಹಳ್ಳಿ ಮಾರ್ಗವಾಗಿ ಹೋಗುವಾಗ ಹೆಚ್​ಡಿ ರೇವಣ್ಣ ಅವರನ್ನು ಕಂಡು ಬೆಂಗಾವಲು ಪಡೆ ಪೊಲೀಸರು ವಾಹನವನ್ನು ನಿಲ್ಲಿಸಿದಾಗ ಕೇಂದ್ರ ಸಚಿವರು ಕುಪಿತಗೊಂಡರು.

ಹಾಸನ, ಜ.8: ಬೆಂಗಾಲು ವಾಹನದ ಪೊಲೀಸರ ಮೇಲೆ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ (Hardeep Singh Puri) ಗುರಂ ಆದ ಘಟನೆ ಹಾಸನ (Hassan) ಜಿಲ್ಲೆಯಲ್ಲಿ ನಡೆದಿದೆ. ಹಳೇಕೋಟೆ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಕೇಂದ್ರ ಸಚಿವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟೂರು ಹರದನಹಳ್ಳಿ ಮಾರ್ಗವಾಗಿ ಹೋಗುವಾಗ ದೇವೇಗೌಡರ ನೂತನ ನಿವಾಸದೆದರು ನಿಂತಿದ್ದ ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರನ್ನು ಕಂಡು ಬೆಂಗಾವಲು ಪಡೆ ಪೊಲೀಸರು ವಾಹನವನ್ನು ನಿಲ್ಲಿಸಿದರು. ಈ ವೇಳೆ ಹರ್ದಿಪ್ ಸಿಂಗ್ ಪುರಿ ಅವರಿಗೆ ಹಾರ ಹಾಕಿ ರೇವಣ್ಣ ಅವರು ಸನ್ಮಾನಿಸಿದರು. ಹರದನಹಳ್ಳಿಯಿಂದ ಹಳೇಕೋಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಹರ್ದಿಪ್ ಸಿಂಗ್ ಪುರಿ ಬೆಂಗಾವಲು ವಾಹನದ ಪೊಲೀಸರ ಮೇಲೆ ಗರಂ ಆದರು. ಮಾರ್ಗಮಧ್ಯೆ ಏಕೆ ವಾಹನ ನಿಲ್ಲಿಸಿದಿರಿ? ಯಾರು ನಿಮಗೆ ವಾಹನ ನಿಲ್ಲಿಸಲು ಹೇಳಿದ್ದು? ನನ್ನ ಸಮಯ ವ್ಯರ್ಥ ಮಾಡಬೇಡಿ ಹೋಗಿ ಎಂದು ಆಕ್ರೋಶ ಹೊರಹಾಕಿದರಲ್ಲದೆ, ಕರ್ತವ್ಯದಲ್ಲಿದ್ದ ಪೊಲೀಸರ ಹೆಸರು ಬರೆದುಕೊಳ್ಳುವಂತೆ ಆಪ್ತಸಹಾಯಕನಿಗೆ ಸೂಚಿಸಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ