Loading video

S Jaishankar: ವಿದೇಶಾಂಗ ಸಚಿವ ಎಸ್​. ಜೈಶಂಕರ್ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ

|

Updated on: Mar 19, 2023 | 1:11 PM

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇಂದು (ಮಾ.19) ಉಡುಪಿಯ ಶ್ರೀ ಕೃಷ್ಣನ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು.

ಉಡುಪಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಅವರು ಇಂದು (ಮಾ.19) ಉಡುಪಿ ಶ್ರೀ ಕೃಷ್ಣನ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು. ನಂತರ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಪೀಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರಿಂದ, ಶ್ರೀ ಕೃಷ್ಣ ಅನುಗ್ರಹ ಪ್ರಸಾದ ಸ್ವೀಕರಿಸಿದರು. ಮಠದ ದಿವಾನರಾದ ವರದರಾಜ್ ಭಟ್ ಸಚಿವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲ ಬಿಜೆಪಿ ಅಧ್ಯಕ್ಷ ಕೊಯಲಾಡಿ ಸುರೇಶ್ ನಾಯಕ್, ವಕ್ತಾರ ಕೆ ರಾಘವೇಂದ್ರ ಕಿಣಿ, ಪೂರ್ಣಿಮಾ ಸುರೇಶ್, ವಿಷ್ಣು ಪ್ರಸಾದ್ ಪಾಡಿಗಾರ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಶ್ರೀನಿಧಿ ಹೆಗಡೆ ಬಿಜೆಪಿ ಪ್ರಭುದ್ಧರ ಪ್ರಕೋಶ್ಠೋದ ಪಾಂಡುರಂಗ ಲಾಗ್ವಂಕರ್, ಉಪಸ್ಥಿತರಿದ್ದರು.