ಛತ್ತೀಸ್‌ಗಢದಲ್ಲಿ ಕೆಳಗಿಂದ ಮೇಲೆ ಹರಿಯುವ ನೀರಿನಲ್ಲಿ ಕಾಗದದ ದೋಣಿ ಬಿಟ್ಟ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, "ಛತ್ತೀಸ್‌ಗಢವು ನೈಸರ್ಗಿಕ ಸೌಂದರ್ಯದಿಂದ ತುಂಬಿದೆ ಮತ್ತು ಪ್ರಕೃತಿಯ ಅದ್ಭುತಗಳು ಸಹ ಇಲ್ಲಿ ಗೋಚರಿಸುತ್ತವೆ. ಇಂದು ನಾವು 'ಉಲ್ಟಾಪಾನಿ' ನೋಡಲು ಬಂದಿದ್ದೇವೆ. ನಿಜಕ್ಕೂ, ಇದು ಒಂದು ಪವಾಡ ಮತ್ತು ಅದ್ಭುತ. ಈ ಸ್ಥಳವನ್ನು ವಿಶೇಷವಾಗಿ ಪ್ರಚಾರ ಮಾಡಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಕೆಳಗಿನಿಂದ ಮೇಲಕ್ಕೆ ಹರಿಯುವ ನೀರಿನಲ್ಲಿ ಸಚಿವರು ಕಾಗದದ ದೋಣಿಯನ್ನು ಕೂಡ ತೇಲಿಬಿಟ್ಟಿದ್ದಾರೆ.
ಛತ್ತೀಸ್ಗಢ, ಜುಲೈ 8: ಛತ್ತೀಸ್ಗಢಕ್ಕೆ ಭೇಟಿ ನೀಡಿರುವ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಹೊಗಳಿದ್ದಾರೆ. ಛತ್ತೀಸ್‌ಗಢವು ನೈಸರ್ಗಿಕ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟಿದೆ. ಇಲ್ಲಿನ ಕೆಲವು ಸ್ಥಳಗಳು ಪ್ರಕೃತಿಯ ಅದ್ಭುತಗಳಿಂದ ಕೂಡಿದೆ. ಮೈನ್‌ಪತ್‌ನಲ್ಲಿ ನಾವು ಕೆಳಭಾಗದಿಂದ ಮೇಲ್ಮುಖವಾಗಿ ಹರಿಯುವ ನೀರಿನ ಪವಾಡವನ್ನು ಕಂಡಿದ್ದೇವೆ ಎಂದಿದ್ದಾರೆ. ಕೆಳಗಿನಿಂದ ಮೇಲಕ್ಕೆ ಹರಿಯುವ ನೀರಿನಲ್ಲಿ ಸಚಿವರು ಕಾಗದದ ದೋಣಿಯನ್ನು ಕೂಡ ತೇಲಿಬಿಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ