ಶ್ವೇತಭವನದಲ್ಲಿ ದೀಪ ಬೆಳಗಿ, ನೃತ್ಯ ಮಾಡಿ ದೀಪಾವಳಿ ಆಚರಿಸಿದ ಅಮೆರಿಕಾ​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

| Updated By: ಸುಷ್ಮಾ ಚಕ್ರೆ

Updated on: Oct 26, 2022 | 3:48 PM

ಭಾರತ ಮೂಲದ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಾರತೀಯರೊಂದಿಗೆ ದೀಪಾವಳಿ ಆಚರಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ಬೆಳಕಿನ ಹಬ್ಬ ದೀಪಾವಳಿಯ (Deepavali) ಸಂಭ್ರಮ ಭಾರತದಲ್ಲಿ ಮಾತ್ರವಲ್ಲ ಅಮೆರಿಕಾದಲ್ಲೂ ಸಡಗರ ತಂದಿದೆ. ಅಮೆರಿಕಾದ ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್​ (Joe Biden) ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ದೀಪ ಹಚ್ಚಿಸಿ ದೀಪಾವಳಿ ಆಚರಿಸಿದ್ದಾರೆ. ಹಾಗೇ, ಭಾರತ ಮೂಲದ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಕೂಡ ಭಾರತೀಯರೊಂದಿಗೆ ದೀಪಾವಳಿ ಆಚರಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಶ್ವೇತಭವನವು ಜನರ ಮನೆಯಾಗಿದೆ ಮತ್ತು ನಮ್ಮ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಒಟ್ಟಾಗಿ ದೀಪಾವಳಿ ಆಚರಿಸಲು ನಮ್ಮೊಡನೆ ಸೇರಿರುವುದು ಸಂತಸ ತಂದಿದೆ ಎಂದು ಕಮಲಾ ಹ್ಯಾರಿಸ್ ಹೇಳಿದರು.

Published on: Oct 26, 2022 03:47 PM