ಬಿಜೆಪಿಯಲ್ಲಿರುವ ಒಗ್ಗಟ್ಟು, ಶಿಸ್ತು ಜೆಡಿಎಸ್ ಪಕ್ಷದಲ್ಲಿಲ್ಲ: ಜಿಟಿ ದೇವೇಗೌಡ, ಜೆಡಿಎಸ್ ಶಾಸಕ

|

Updated on: May 22, 2024 | 11:27 AM

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಮತ್ತು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ-ಮೊದಲಾದವರೆಲ್ಲ ಜೊತೆಗೂಡಿರುವುದರಿಂದ ನಮ್ಮ ಒಗ್ಗಟ್ಟಿನ ಮುಂದೆ ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಗೆಲ್ಲಲಾರದು ಎಂದು ದೇವೇಗೌಡ ಹೇಳಿದರು.  

ಮೈಸೂರು: ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (GT Devegowda) ನೇರ ಮಾತುಗಾರಿಕೆಗೆ ಖ್ಯಾತರು. ಇವತ್ತು ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಕೆ ವಿವೇಕಾನಂದ (K Vivekananda) ಪರ ಮತ ಯಾಚಿಸುವಾಗ, ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ (HD Kumaraswamy) ಸಮ್ಮುಖದಲ್ಲೇ ತಮ್ಮ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದರು. ಜೆಡಿಎಸ್ ಈಗ ಬಿಜೆಪಿ ಜೊತೆ ಮೈತ್ರಿ ಬೆಳೆಸಿರುವುದರಿಂದ ಆ ಪಕ್ಷದಿಂದ ತಮ್ಮ ಪಕ್ಷದ ಸದಸ್ಯರು ಕಲಿಯುವುದು ಸಾಕಷ್ಟಿದೆ ಎಂದು ಹೇಳಿದ ಅವರು, ಯಾವುದೇ ಕಾರ್ಯಕ್ರಮದ ಆಯೋಜನೆಯಲ್ಲಿ ತಮ್ಮ ಪಕ್ಷದ ನಾಯಕರನ್ನು ಹೆಸರಿಡಿದು ಆಮಂತ್ರಿಸಬೇಕಾಗುತ್ತದೆ, ತಾವಾಗಿಯೇ ಅವರು ಬರೋದಿಲ್ಲ, ಆದರೆ ಬಿಜೆಪಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಸ್ಥಿತಿ ಇದೆ, ಅಲ್ಲಿ ಯಾವ ಮುಖಂಡನನ್ನೂ ಪ್ರತ್ಯೇಕವಾಗಿ ಆಹ್ವಾನಿಸಲ್ಲ, ಅವರಷ್ಟಕ್ಕೆ ಅವರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದರು. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಮತ್ತು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ-ಮೊದಲಾದವರೆಲ್ಲ ಜೊತೆಗೂಡಿರುವುದರಿಂದ ನಮ್ಮ ಒಗ್ಗಟ್ಟಿನ ಮುಂದೆ ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಗೆಲ್ಲಲಾರದು ಎಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರೊ.ಭಗವಾನ್ ಅರೆ ಹುಚ್ಚ: ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಜಿಟಿ ದೇವೇಗೌಡ ಕೆಂಡಾಮಂಡಲ