Daily Devotional: ಅರ್ಚನೆ ಮಾಡಿಸಲು ಗೋತ್ರ ಗೊತ್ತಿಲ್ಲದಿದ್ದರೆ ಹೀಗೆ ಮಾಡಿ
ದೇವಸ್ಥಾನಗಳಲ್ಲಿ ಪೂಜೆ ಸಮಯದಲ್ಲಿ ಗೋತ್ರ ವಿಚಾರಣೆ ಸಾಮಾನ್ಯ. ಗೋತ್ರ ತಿಳಿದಿಲ್ಲದವರಿಗೆ ಚಿಂತೆ ಉಂಟಾಗುತ್ತದೆ. ಜ್ಯೋತಿಷಿ ಬಸವರಾಜ ಗುರೂಜಿ ಅವರು ಈ ಸಮಸ್ಯೆಗೆ ಪರಿಹಾರ ತಿಳಿಸಿದ್ದಾರೆ. ಗೋತ್ರದ ಪ್ರಾಮುಖ್ಯತೆ ಮತ್ತು ಗೋತ್ರ ತಿಳಿಯದಿದ್ದರೆ ಏನು ಮಾಡಬೇಕು ಎಂಬುದನ್ನು ಈ ಲೇಖನ ವಿವರಿಸುತ್ತದೆ. ನಿಮ್ಮ ಗೋತ್ರದ ಬಗ್ಗೆ ತಿಳಿದುಕೊಳ್ಳುವುದು ಮತ್ತು ಸರಿಯಾದ ಪೂಜಾ ವಿಧಾನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
ದೇವತೆಗಳ ಉಪಾಸನೆಯನ್ನು ಮಾಡುವಾಗ ನಾವು ವಿವಿಧ ಪದ್ಧತಿಗಳನ್ನು ಅವಲಂಬಿಸುತ್ತೇವೆ. ಅವುಗಳಲ್ಲಿ ಅರ್ಚನ ಭಕ್ತಿಯೂ ಒಂದಾಗಿದೆ. ಹಿಂದೂ ಧರ್ಮದಲ್ಲಿ ಕುಲ, ಗೋತ್ರ, ನಕ್ಷತ್ರ ಮತ್ತು ರಾಶಿ ಒಬ್ಬ ವ್ಯಕ್ತಿಯ ಆಗು ಹೋಗುಗಳನ್ನು ನಿರ್ಧರಿಸುತ್ತವೆ. ದೇವಸ್ಥಾನಕ್ಕೆ ಹೋದ ಸಮಯದಲ್ಲಿ ಅಲ್ಲಿ ಅರ್ಚಕರು ನಿಮ್ಮ ಗೋತ್ರ ಯಾವುದು ಎಂದು ಕೇಳುತ್ತಾರೆ. ಈ ವೇಳೆ ಕೆಲವರು ಗೊತ್ತಿಲ್ಲ ಅಂತಾರೆ. ದೇವಸ್ಥಾನದಲ್ಲಿ ನಿಮ್ಮ ಹೆಸರಲ್ಲಿ ಪೂಜೆ ಮಾಡುವಾಗ ನಿಮ್ಮ ಹೆಸರು, ಜನ್ಮ ನಕ್ಷತ್ರ ಮತ್ತು ಗೋತ್ರ ವಿಚಾರಿಸಿ ನಂತರ ಸಂಕಲ್ಪ ಮಾಡುವರು. ಕೆಲವರಿಗೆ ತಮ್ಮ ಗೋತ್ರದ ಬಗ್ಗೆ ಯಾವುದೇ ಅರಿವು ಇಲ್ಲದೆ ಚಡಪಡಿಕೆ ಉಂಟಾಗುತ್ತದೆ. ಗೋತ್ರ ಗೊತ್ತಿರದಿದ್ದರೆ ಯಾವ ಗೋತ್ರ ಹೇಳಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos