DKS in Ramanagara; ಗ್ಯಾರಂಟಿಗಳನ್ನು ಈಡೇರಿಸದ ಹೊರತು ಸುರೇಶ್ಗಾಗಿ ವೋಟು ಕೇಳಲು ರಾಮನಗರಕ್ಕೆ ಬರೋದಿಲ್ಲ: ಡಿಕೆ ಶಿವಕುಮಾರ್
ವಿಧಾನ ಸಭಾ ಚುನಾವಣೆಯಲ್ಲಿ ತನಗೆ ಕನಕಪುರದಲ್ಲಿ ನೀಡಿದ ಹಾಗೆ ಭರ್ಜರಿ ಬಹುಮತ ನೀಡಿ ಸುರೇಶ್ ರನ್ನು ಗೆಲ್ಲಿಸಬೇಕು ಎಂದು ನೆರೆದ ಜನರನ್ನು ಶಿವಕುಮಾರ್ ಆಗ್ರಹಿಸಿದರು.
ರಾಮನಗರ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಈಗಾಗಲೇ ಲೋಕಸಭಾ ಚುನಾವಣೆ ಮೂಡ್ ನಲ್ಲಿದ್ದಾರೆ ಅಂತ ಕಾಣುತ್ತೆ. ತಮ್ಮ ತವರರು ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತಾಡಿದ ಶಿವಕುಮಾರ್ ಕಾಂಗ್ರೆಸ್ ಪಕ್ಷ ಚುನಾವಣೆ ಸಮಯದಲ್ಲಿ ನೀಡಿದ ಗ್ಯಾರಂಟಿಗಳನ್ನು (Guarantees) ಒಂದೊಂದಾಗಿ ಈಡೇರಿಸುತ್ತಿದೆ, ಶಕ್ತಿ ಯೋಜನೆ ಜಾರಿಗೆ ಬಂದಿದೆ, ಮತ್ತು ಮುಂದಿನ ತಿಂಗಳಿಂದ ಯಾರೂ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ ಎಂದು ಹೇಳಿದ ಶಿವಕುಮಾರ್ ಮುಂದಿನ ಕೆಲ ದಿನಗಳಲ್ಲಿ ಎಲ್ಲ ಗ್ಯಾರಂಟಿಗಳನ್ನು ಈಡೇರಿಸದಿದ್ದರೆ ಲೋಕ ಸಭಾ ಚುನಾವಣೆಯಲ್ಲಿ ತನ್ನ ತಮ್ಮ ಡಿಕೆ ಸುರೇಶ್ (DK Suresh) ಪರ ವೋಟು ಕೇಳಲು ಜನರ ಮುಂದೆ ಬರೋದಿಲ್ಲ ಎಂದರು. ವಿಧಾನ ಸಭಾ ಚುನಾವಣೆಯಲ್ಲಿ ತನಗೆ ಕನಕಪುರದಲ್ಲಿ ನೀಡಿದ ಹಾಗೆ ಭರ್ಜರಿ ಬಹುಮತ ನೀಡಿ ಸುರೇಶ್ ರನ್ನು ಗೆಲ್ಲಿಸಬೇಕು ಎಂದು ನೆರೆದ ಜನರನ್ನು ಶಿವಕುಮಾರ್ ಆಗ್ರಹಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos