ಹೂಡಿಕೆದಾರರು ಬಂದು ಉದ್ದಿಮೆಗಳನ್ನು ಸ್ಥಾಪಿಸದ ಹೊರತು ಉದ್ಯೋಗಗಳು ಸೃಷ್ಟಿಯಾಗಲಾರವು: ಸಿದ್ದರಾಮಯ್ಯ
ಹೂಡಿಕೆದಾರರು ಇಲ್ಲವೆಂದರೆ ಹೊಸ ಉದ್ದಿಮೆಗಳು ಹೇಗೆ ಅಸ್ತಿತ್ವಕ್ಕೆ ಬರುತ್ತವೆ, ಉದ್ಯೋಗಗಳು ಎಲ್ಲಿಂದ ಸೃಷ್ಟಿಯಾಗುತ್ತವೆ, ಜನರ ಕೈಯಲ್ಲಿ ಉದ್ಯೋಗ ಇಲ್ಲ ಅಂತಾದರೆ ಅವರ ಆದಾಯ ಹೇಗೆ ದ್ವಿಗುಣಗೊಳ್ಳುತ್ತದೆ, ಈ ಸಂಗತಿಗಳು ಒಂದಕ್ಕೊಂದು ಬೆಸೆದುಕೊಂಡಿವೆ ಎಂದು ಸಿದ್ದರಾಮಯ್ಯ ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಶುಕ್ರವಾರ ಮತ್ತೊಮ್ಮೆ ಸರ್ಕಾರ ಹರಿಹಾಯ್ದರು. ಅವರ ಕ್ಷೇತ್ರ ಬಾದಾಮಿಯ (Badami) ಉಗಲವಾಟದಲ್ಲಿ ಮಾಧ್ಯಮದವರ ಜೊತೆ ಮಾತಾಡಿದ ಅವರು ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ ಸರ್ಕಾರ ಸತ್ತು ಹೋಗಿದೆ ಎಂದು ಹೇಳಿದರು. ರಾಜ್ಯ ಯಾವುದೇ ಆಗಿರಲಿ, ಅಲ್ಲಿ ಶಾಂತಿ ಸುವ್ಯವಸ್ಥೆ (Law and Order) ನೆಲೆಗೊಂಡಿರುವುದು ಅತ್ಯವಶ್ಯಕವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಸಮಾಜದಲ್ಲಿ ಶಾಂತಿ ನೆಲೆಗೊಂಡಿರುವುದು ಬಹಳ ಮುಖ್ಯವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೆ, ದೊಂಬಿಗಳು ನಡೆಯುತ್ತಿದ್ದರೆ ಹೂಡಿಕೆದಾರರು ಬರಲು ಹಿಂಜರಿಯುತ್ತಾರೆ. ಕಳೆದ ಎರಡು ವರ್ಷಗಳಿಂದ ಒಬ್ಬೇ ಒಬ್ಬ ಹೂಡಿಕೆದಾರ ಕರ್ನಾಟಕಕ್ಕೆ ಬಂದು ಯಾವುದಾದರೂ ಪ್ರಾಜೆಕ್ಟ್ ಆರಂಭಿಸುವ ಸಾಹಸಕ್ಕೆ ಮುಂದಾಗಿಲ್ಲ. ಅಸಲು ಸಂಗತಿ ಏನೆಂದರೆ, ಈಗಾಗಲೇ ನಿವೇಶನ ಹೂಡಿದವರು ಸಹ ತಮ್ಮ ಸಾಮಾನು ಸರಂಜಾಮು ಹೊತ್ತುಕೊಂಡು ಬೇರೆ ಕಡೆ ಹೋಗುತ್ತಿದ್ದಾರೆ, ಎಂದು ಸಿದ್ದರಾಮಯ್ಯ ಹೇಳಿದರು.
ಹೂಡಿಕೆದಾರರು ಇಲ್ಲವೆಂದರೆ ಹೊಸ ಉದ್ದಿಮೆಗಳು ಹೇಗೆ ಅಸ್ತಿತ್ವಕ್ಕೆ ಬರುತ್ತವೆ, ಉದ್ಯೋಗಗಳು ಎಲ್ಲಿಂದ ಸೃಷ್ಟಿಯಾಗುತ್ತವೆ, ಜನರ ಕೈಯಲ್ಲಿ ಉದ್ಯೋಗ ಇಲ್ಲ ಅಂತಾದರೆ ಅವರ ಆದಾಯ ಹೇಗೆ ದ್ವಿಗುಣಗೊಳ್ಳುತ್ತದೆ, ಈ ಸಂಗತಿಗಳು ಒಂದಕ್ಕೊಂದು ಬೆಸೆದುಕೊಂಡಿವೆ ಎಂದು ಸಿದ್ದರಾಮಯ್ಯ ಹೇಳಿದರು.
ಹೊರಗಿನವರ ಇನ್ವೆಸ್ಟ್ ಮೆಂಟ್ ಇಲ್ಲದೆ ರಾಜ್ಯ ಅಭಿವೃದ್ಧಿ ಹೊಂದಲಾರದು ಅಂತ ಹೇಳಿದ ಸಿದ್ದರಾಮಯ್ಯನವರು ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾವರಣವನ್ನು ಒದಗಿಸಬೇಕು. ಅವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಶಾಂತಿ ಮತ್ತು ಸುವ್ಯವಸ್ಥೆ ಎಂದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಗಲಭೆಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರು ಈ ಮಾತುಗಳನ್ನು ಹೇಳುತ್ತಿದ್ದಾರೆನ್ನುವುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಅದಾನಿ, ಅಂಬಾನಿಯನ್ನ ಹುಟ್ಟಿಸಿದ್ದು ನರೇಂದ್ರ ಮೋದಿನಾ?; ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ