AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ, ಅಂಬಾನಿಯನ್ನ ಹುಟ್ಟಿಸಿದ್ದು ನರೇಂದ್ರ ಮೋದಿನಾ?; ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ

ಸಿದ್ದರಾಮಯ್ಯನವರು ಯಾವ ಜಮೀನಿನಲ್ಲಿ ಬೆಳೆ ಬೆಳೆದಿದ್ದಾರೆ. ಯಾವ ಬೆಳೆ ಬೆಳೆದು ಸಿದ್ದರಾಮಯ್ಯನವರು ಹಣ ಮಾಡಿದರು? ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇವತ್ತು ಶ್ರೀಮಂತರಾಗಿಲ್ವಾ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಅದಾನಿ, ಅಂಬಾನಿಯನ್ನ ಹುಟ್ಟಿಸಿದ್ದು ನರೇಂದ್ರ ಮೋದಿನಾ?; ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
TV9 Web
| Updated By: sandhya thejappa|

Updated on:Apr 21, 2022 | 12:58 PM

Share

ಮೈಸೂರು: ಅಂಬಾನಿ, ಅದಾನಿ ಸಂಪತ್ತಿನ ಬಗ್ಗೆ ಪ್ರಶ್ನೆ ಮಾಡಿದ್ದ ಸಿದ್ದರಾಮಯ್ಯಗೆ (Siddaramaiah) ಬಿಜೆಪಿ ಸಂಸದ ಪ್ರತಾಪ್ ಸಿಂಹ (Prathap Simha) ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ಯಾವ ಜಮೀನಿನಲ್ಲಿ ಬೆಳೆ ಬೆಳೆದಿದ್ದಾರೆ. ಯಾವ ಬೆಳೆ ಬೆಳೆದು ಸಿದ್ದರಾಮಯ್ಯನವರು ಹಣ ಮಾಡಿದರು? ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇವತ್ತು ಶ್ರೀಮಂತರಾಗಿಲ್ವಾ? 30, 40 ವರ್ಷಗಳ ಹಿಂದೆ ಇದ್ದಂತೆ ಈಗಲೂ ಇದ್ದಾರಾ? ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಡಿಕೆಶಿ ಏನಾಗಿದ್ದರು? ಉದ್ಯಮಿಗಳ ಶ್ರೀಮಂತಿಕೆ ಬಗ್ಗೆ ಮಾತನಾಡುವ ನೀವು, ರಾಜಕಾರಣಿಗಳ ಶ್ರೀಮಂತಿಕೆ ಬಗ್ಗೆ ಏಕೆ ಮಾತನಾಡುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಅದಾನಿ, ಅಂಬಾನಿಯನ್ನ ಹುಟ್ಟಿಸಿದ್ದು ನರೇಂದ್ರ ಮೋದಿನಾ? ಎಂದು ಪ್ರಶ್ನೆ ಮಾಡಿದ ಪ್ರತಾಪ್ ಸಿಂಹ, ಮೋದಿ ಬರುವ ಮೊದಲು ಅವರು ಶ್ರೀಮಂತರಾಗಿರಲಿಲ್ವಾ? ಮಾತೆತ್ತಿದರೆ ಅದಾನಿ, ಅಂಬಾನಿ ಅಂತೀರಾ. ಎಷ್ಟೋ ಶ್ರೀಮಂತ ಉದ್ಯಮಿಗಳು ಹುಟ್ಟಿದ್ದು ಯಾರ ಕಾಲದಲ್ಲಿ? ಆಸ್ತಿ ಮೌಲ್ಯ ಹೆಚ್ಚಾದಂತೆ ಶ್ರೀಮಂತಿಕೆ ಹೆಚ್ಚಾಗುತ್ತದೆ. ಶ್ರೀಮಂತಿಕೆ ಹೆಚ್ಚಾಗಲು ಮೋದಿ ಕಾರಣ ಅಂದರೆ ಏನರ್ಥ? ಎಂದಿದ್ದಾರೆ.

ಇದೇ ವೇಳೆ ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್​ನಿಂದ ಗಲಭೆ ನಡೆದ ಪ್ರಕರಣದ ಬಗ್ಗೆ ಪ್ರತಾಪ್ ಸಿಂಹ ಮಾತನಾಡಿದರು. ಗಲಭೆಗಳಲ್ಲಿ ಮುಸ್ಲಿಮರ ಮನಸ್ಥಿತಿ ಹೇಗಿದೆ ಎಂದು ಗೊತ್ತಾಗಿದೆ. ಮುಸ್ಲಿಮರ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿಲ್ಲ. ಹಿಂದೂಗಳ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಲು ಹೊಡೆಯುವುದು ಮುಸಲ್ಮಾನರ ಸಂಸ್ಕೃತಿಯಾಗಿದೆ. ಭಾರತದ ಮುಸ್ಲಿಮರು ಮೆಕ್ಕಾ, ಮದೀನಾದಲ್ಲಿ ಹುಟ್ಟಿಲ್ಲ. ಮುಸ್ಲಿಮರಲ್ಲೂ ನಮ್ಮದೇ ಡಿಎನ್​ಎ, ನಮ್ಮದೇ ರಕ್ತ ಇದೆ. ಕಲ್ಲು ತೂರುವುದನ್ನ ಬಿಡದಿದ್ದರೆ ಬುಲ್ಡೋಜರ್ ಬರಲಿದೆ. ಉತ್ತರ ಪ್ರದೇಶದಲ್ಲಿರುವಂತೆ ಕರ್ನಾಟಕದಲ್ಲಿಯೂ ಆಗಲಿದೆ ಎಂದರು.

ಇನ್ಮೇಲೆ ಏಟಿಗೆ ಏಟು: ಮೆಕ್ಕಾ‌, ಮದೀನಾದಲ್ಲಿ ಸೈತಾನನಿಗೆ ಕಲ್ಲು ಹೊಡೆಯುತ್ತಾರೆ. ಹಿಂದೂಗಳ ಯಾತ್ರೆಯನ್ನ ಸೈತಾನನ ರೀತಿ ನೋಡ್ತಾರೆ.  ನೆಲೆ ಕೇಳಿ ಹಿಂದೂ ರಾಷ್ಟ್ರಕ್ಕೆ ಬಂದವರು ಮುಸ್ಲಿಮರು. ಮತಾಂತರದಿಂದ ಅರಬ್ DNA ಬಂದಂತೆ ವರ್ತಿಸಬೇಡಿ. ಕಲ್ಲು ಬಿಸಾಕಿದರೆ ಬುಲ್ಡೋಜರ್ ಮನೆ ಮುಂದೆ ಬರುತ್ತದೆ. ದಾವೂದ್ ಇಬ್ರಾಹಿಂ ನಮ್ಮವನೆಂದು ನಿಮಗೆ ಅನ್ನಿಸುತ್ತದೆ. ಛೋಟಾ ರಾಜನ್ ನಮ್ಮವನೆಂದು ಹಿಂದೂಗಳು ಹೇಳಲ್ಲ. ಕಲ್ಲು ಹೊಡೆದರೆ ಹಣ್ಣು ಕೊಡುವ ಕಾಲ ಹೋಯಿತು. ಕಲ್ಲು ಹೊಡೆದು ಗುಲಾಬಿ ಹೂ, ಹಣ್ಣನ್ನ ನಿರೀಕ್ಷಿಸಬೇಡಿ. ಇನ್ಮೇಲೆ ಏಟಿಗೆ ಏಟು ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ

ದೆಹಲಿಯ ಜಹಾಂಗೀರ್​ಪುರಿ ಡೆಮಾಲಿಷನ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್​ನಿಂದ ತಡೆಯಾಜ್ಞೆ

ನಿಮ್ಮ ಟೈಮ್​ಲೈನ್: ಯಾರಿಗೆ ಬೇಕು ರಾಮರಾಜ್ಯ? ಓ ಕಲ್ಕಿಯೇ ಬೇಗ ಬಾ, ಹೆಣ್ಣುಗಳೆಲ್ಲರ ಅಂಕೆ ತಪ್ಪಿಸು ಬಾ

Published On - 12:54 pm, Thu, 21 April 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ