Loading video

ಬಿಜೆಪಿ ಮತ್ತು ಜೆಡಿಎಸ್ ನಾಯಕರ ಹಾಗೆ ನಾನು ಹೆಣಗಳ ಮೇಲೆ ರಾಜಕೀಯ ಮಾಡಲ್ಲ: ಡಿಕೆ ಶಿವಕುಮಾರ್

Updated on: Jun 16, 2025 | 1:22 PM

ಸಿದ್ದರಾಮಯ್ಯ ಸರ್ಕಾರ ಎಲ್ಲದರ ಮೇಲೂ ತೆರಿಗೆ ಹೆಚ್ಚಿಸುತ್ತಿದೆ, ಇದೇ ಹಿನ್ನೆಲೆಯಿಂದ ನೋಡುವುದಾದರೆ ಮತ್ತು ಈ ಹಂತದಲ್ಲಿ ತಾನು ಮುಖ್ಯಮಂತ್ರಿಯಾಗಿದ್ದರೆ ಗ್ರಹಲಕ್ಷ್ಮಿ ಫಲಾನುಭವಿಗಳಿಗೆ ₹ 5,000 ಪ್ರತಿ ತಿಂಗಳು ಕೊಡುತ್ತಿದ್ದೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಹೆಚ್ಚೇನೂ ಹೇಳದೆ, ಆಯ್ತು ದೇವರು ಅವರನ್ನು ಚೆನ್ನಾಗಿಟ್ಟಿರಲಿ, ಅರೋಗ್ಯ ಚೆನ್ನಾಗಿರಲಿ ಎಂದರು.

ಬೆಂಗಳೂರು, ಜೂನ್ 16: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದ (Ahmedabad Plane Crash) ಹಿನ್ನೆಲೆಯಲ್ಲಿ ಅವರಿವರ ರಾಜೀನಾಮ ಕೊಡಬೇಕು ಅಂತ ತಾನು ಮಾತಾಡಲ್ಲ, ನಾಗರಿಕ ವಿಮಾನಯಾನ ಇಲಾಖೆ ದುರಂತದ ಕಾರಣ ಪತ್ತೆಹಚ್ಚುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ ಎಂದು ಹೇಳಿದರು. ತಾನು ತಾಂತ್ರಿಕ ಅಂಶಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ವ್ಯಕ್ತಿಯಾಗಿರುವುದರಿಂದ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಹಾಗೆ ಹೆಣದ ಮೇಲೆ ರಾಜಕೀಯ ಮಾಡುವ ಕೆಲಸಕ್ಕೆ ಮುಂದಾಗಲ್ಲ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:    ನನ್ನ ಬಗ್ಗೆ ಅಸೂಯೆ ಪಡೋದ್ರಿಂದ ಕುಮಾರಸ್ವಾಮಿಗೆ ಖುಷಿ ಸಿಗೋದಾದರೆ ಬಹಳ ಸಂತೋಷ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ