ಬೇರೆಯವರ ಹಾಗೆ ನಾವು ಪೆನ್ ಡ್ರೈವ್ ಹಿಡಿದುಕೊಂಡು ಬೀದೀಲಿ ನಾಟಕವಾಡಲ್ಲ: ಚಲುವರಾಯಸ್ವಾಮಿ
ಸರ್ಕಾರ ನಡೆಸುತ್ತಿರುವ ತಾವು ಪೆನ್ ಡ್ರೈವ್ ಗಳನ್ನು ಹಿಡಿದು ಬೀದಿಯಲ್ಲಿ ನಾಟಕ ಮಾಡಲು ಬರಲ್ಲ, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ, ಆಯೋಗದ ತನಿಖೆ ಮುಗಿದ ಬಳಿಕ ಯಾರು ತಪ್ಪಿತಸ್ಥರು ಯಾರು ನಿರ್ದೋಷಿಗಳು ಅನ್ನೋದು ಬಯಲಾಗುತ್ತದೆ, ಒಂದೆರಡು ತಿಂಗಳುವರೆಗೆ ಕಾದುನೋಡಿ ಎಂದು ಚಲುವರಾಯಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಮಂಡ್ಯ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ವಿರೋಧಿಸಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತಾಡಿದ ಚಲುವರಾಯಸ್ವಾಮಿ, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ನ್ಯಾಯಾಂಗ ಸಮತಿಯೊಂದನ್ನು ರಚಿಸಿ ತನಿಖೆ ನಡೆಸಲು ಮುಕ್ತ ಅವಕಾಶ ನೀಡಿದೆ. ತನಿಖೆ ನಡೆಯುತ್ತಿದೆ, ಅದು ಮುಗಿದ ಬಳಿಕ ಯಾರೆಲ್ಲ ಹೆಸರುಗಳು ಹೊರಬೀಳುತ್ತವೆ ಅನ್ನೋದನ್ನ ನೋಡ್ತಾ ಇರಿ ಎಂದು ಹೇಳಿದರು. ಸರ್ಕಾರದ ವಿರುದ್ಧ ಮತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿರುವ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಚಲುವರಾಯಸ್ವಾಮಿ, ಅವರ ಪ್ರತಿಭಟನೆ ನಮಗೆ ಗೊತ್ತಿಲ್ವಾ? ಯಾವ ತಪ್ಪು ಮಾಡದ ಮುಖ್ಯಮಂತ್ರಿಯವರ ವಿರುದ್ಧ ಸುಖಾಸುಮ್ಮನೆ ಬಿಜೆಪಿ ನಾಯಕರು ಆರೋಪ ಹೊರಿಸುತ್ತಿದ್ದಾರೆ ಎಂದು ಮೈಸೂರಲ್ಲಿ ಕಾಂಗ್ರೆಸ್ ಜನಾಂದೋಲನ ನಡೆಸಿದರೆ ಒಂದೂವರೆ ಲಕ್ಷ ಸೇರಿದ್ದರು, ಅದರೆ ಸಿಎಂ ಮೇಲೆ ಸುಳ್ಳು ಆರೋಪ ಹೊರೆಸಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಬೆಂಗಳೂರುನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿ ಮೈಸೂರಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ 25,000 ಜನ ಭಾಗಿಯಾಗಿದ್ದರು ಎಂದು ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ ವಿರುದ್ಧದ ಮುಡಾ ಪ್ರಕರಣದ ಆದೇಶ ಕಾಯ್ದಿರಿಸಿದ ಕೋರ್ಟ್: ವಾದ-ಪ್ರತಿವಾದ ಹೇಗಿತ್ತು? ಇಲ್ಲಿದೆ ನೋಡಿ