Chikkaballapur: ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ತಳ್ಳಾಟ-ನೂಕಾಟ, ಜಗಳ
ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಬಳಿಕ ಕಾರ್ಯಕರ್ತರು ಅಲ್ಲಿಂದ ಚದುರಿದರು.
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೂ ಕಾರ್ಯಕರ್ತರ ನಡುವೆ ವಾಗ್ವಾದ, ಜಗಳಗಳು ನಿಂತಿಲ್ಲ. ಇಂದು ಜಿಲ್ಲೆಯ ಶಿಡ್ಲಘಟ್ಟದಲ್ಲಿರುವ ಕಾಂಗ್ರೆಸ್ ಭವನದಲ್ಲಿ (Congress Bhavan) ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಆತ್ಮಾವಲೋಕನಾ (retrospection) ಸಭೆ ಆಯೋಜಿಸಲಾಗಿತ್ತು. ಸಭೆ ನಡೆಯುವಾಗ ಮುಖಂಡರೊಬ್ಬರ (leader) ಮಾತಿನಿಂದ ಕಾರ್ಯಕರ್ತರ ಒಂದು ಬಣ ರೊಚ್ಚಿಗೆದ್ದಿತು. ಮತ್ತೊಂದು ಬಣದ ಕಾರ್ಯಕರ್ತರು ಉರಿದು ಬಿದ್ದ ಕಾರಣ ಎರಡು ಬಣಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಳ್ಳಾಟ ದೊಬ್ಬಾಟ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಬಳಿಕ ಕಾರ್ಯಕರ್ತರು ಅಲ್ಲಿಂದ ಚದುರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ