Video: ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ಸರಿಯಾಗಿ ಕಿವಿ ಕೇಳಿಸದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
ಏರು ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಶ್ರವಣದೋಷ ಇರುವ ವ್ಯಕ್ತಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸಾಮಾನ್ಯವಾಗಿ ಅಷ್ಟಾಗಿ ಕಿವಿ ಕೇಳಿದರೆ ಇರುವವರು ದೊಡ್ಡ ಧ್ವನಿಯಲ್ಲಿ ಮಾತನಾಡುವುದು ಸಾಮಾನ್ಯ. ಆದರೆ ಅದನ್ನು ಅರ್ಥ ಮಾಡಿಕೊಳ್ಳದೆ ಪೊಲೀಸ್ ಅಧಿಕಾರಿಯೊಬ್ಬರು ಮನಬಂದಂತೆ ಥಳಿಸಿದ್ದಾರೆ. ಮೊಹರಂ ಮೆರವಣಿಗೆಗೆ ಮುಂಚಿತವಾಗಿ ಪೊಲೀಸ್ ಅಧಿಕಾರಿಗಳು ಆ ಪ್ರದೇಶದಲ್ಲಿ ಡಿಜೆ ಆಪರೇಟರ್ಗಳನ್ನು ಭೇಟಿಯಾಗಲು ಬಂದಾಗ ಘಟನೆ ನಡೆದಿದೆ.
ಕಾನ್ಪುರ, ಜೂನ್ 29: ಏರು ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಶ್ರವಣದೋಷ ಇರುವ ವ್ಯಕ್ತಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸಾಮಾನ್ಯವಾಗಿ ಅಷ್ಟಾಗಿ ಕಿವಿ ಕೇಳಿದರೆ ಇರುವವರು ದೊಡ್ಡ ಧ್ವನಿಯಲ್ಲಿ ಮಾತನಾಡುವುದು ಸಾಮಾನ್ಯ. ಆದರೆ ಅದನ್ನು ಅರ್ಥ ಮಾಡಿಕೊಳ್ಳದೆ ಪೊಲೀಸ್ ಅಧಿಕಾರಿಯೊಬ್ಬರು ಮನಬಂದಂತೆ ಥಳಿಸಿದ್ದಾರೆ. ಮೊಹರಂ ಮೆರವಣಿಗೆಗೆ ಮುಂಚಿತವಾಗಿ ಪೊಲೀಸ್ ಅಧಿಕಾರಿಗಳು ಆ ಪ್ರದೇಶದಲ್ಲಿ ಡಿಜೆ ಆಪರೇಟರ್ಗಳನ್ನು ಭೇಟಿಯಾಗಲು ಬಂದಾಗ ಘಟನೆ ನಡೆದಿದೆ.
ಡಿಜೆ ಅಂಗಡಿಯನ್ನು ಮುಚ್ಚಲಾಗಿತ್ತು, ಅಲ್ಲೇ ಹೊರಗೆ ಕುಳಿತಿರುವ ವೃದ್ಧರೊಬ್ಬರ ಬಳಿ ಅಂಗಡಿ ಹೊರಗಿರುವ ಬೋರ್ಡ್ ಬಗ್ಗೆ ಕೇಳಿದ್ದಾರೆ. ಆ ವ್ಯಕ್ತಿಗೆ ಸರಿಯಾಗಿ ಕಿವಿ ಕೇಳಿಸದ ಕಾರಣ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಲಾಗಲಿಲ್ಲ. ಸ್ವಲ್ಪ ಏರು ಧ್ವನಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅದನ್ನು ಕೇಳಿ ಕೆಂಡಾಮಂಡಲವಾದ ಪೊಲೀಸ್ ಅಧಿಕಾರಿ ರಜಪೂತ್ ವೃದ್ಧರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ