ಸರ್ಕಾರಿ ಆಸ್ಪತ್ರೆಯೊಳಗೆ ಬನಿಯನ್ ಹಾಕಿಕೊಂಡು ಪ್ರೇಯಸಿ ಜೊತೆ ಡಾಕ್ಟರ್ ಡ್ಯಾನ್ಸ್!

Updated on: Nov 21, 2025 | 8:28 PM

ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯ ವೈದ್ಯರು ಡ್ಯೂಟಿ ರೂಂನೊಳಗೆ ತನ್ನ ಪ್ರೇಯಸಿಯ ಜೊತೆಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಶಾಮ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು'ಬನಿಯನ್' ಹಾಕಿಕೊಂಡು ತನ್ನ ಪ್ರಿಯತಮೆ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಶಾಮ್ಲಿ, ನವೆಂಬರ್ 21: ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರೊಬ್ಬರು ತಾವು ಡ್ಯೂಟಿ ರೂಂನೊಳಗೆ ನೃತ್ಯ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ವಿವಾದಕ್ಕೆ ಸಿಲುಕಿದ್ದಾರೆ. ಅಫ್ಕರ್ ಸಿದ್ದಿಕ್ ಎಂಬ ವೈದ್ಯ ಬನಿಯನ್ ಧರಿಸಿ, ತನ್ನ ಪ್ರೇಯಸಿಯ ಜೊತೆ ಸರ್ಕಾರಿ ಆಸ್ಪತ್ರೆಯ ರೂಂನೊಳಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ (Video Viral) ಆಗಿದೆ. ಅವರಿಬ್ಬರೂ ಅನುಷ್ಕಾ ಶರ್ಮಾ ಮತ್ತು ರಣವೀರ್ ಸಿಂಗ್ ಅಭಿನಯದ ಬಾಲಿವುಡ್ ಚಿತ್ರ ಬ್ಯಾಂಡ್ ಬಾಜಾ ಬಾರಾತ್‌ನ “ದಮ್ ದಮ್ ಮಸ್ತ್ ಹೈ” ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ವಿವರಣೆ ನೀಡುವಂತೆ ಮುಖ್ಯ ವೈದ್ಯಾಧಿಕಾರಿ (ಸಿಎಮ್‌ಒ) ಆ ವೈದ್ಯರಿಗೆ ನೋಟಿಸ್ ಕಳುಹಿಸಿದ್ದಾರೆ. ಈ ವಿಷಯದ ಬಗ್ಗೆ ವಿವರವಾದ ತನಿಖೆ ಆರಂಭಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 21, 2025 07:55 PM