Karnataka Assembly Polls: ಕರ್ನಾಟಕದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿ ಅಡಳಿತ ಜಾರಿಗೆ ತರುತ್ತೇವೆ: ಬಸನಗೌಡ ಯತ್ನಾಳ್
ಯುಪಿ ಪೊಲೀಸರು ಎನ್ ಕೌಂಟರ್ ನಡೆಸಿ ರೌಡಿ, ಗೂಂಡಾಗಳ ಕತೆ ಮುಗಿಸುವ ಹಾಗೆ ಕರ್ನಾಟಕದಲ್ಲಿ ಯಾರಾದರೂ ಭಾರತದ ಬಗ್ಗೆ, ಹಿಂದೂಗಳ ಬಗ್ಗೆ ಹಿಂದುತ್ವದ ಬಗ್ಗೆ ಮಾತಾಡಿದರೆ ಎನ್ ಕೌಂಟರ್ ಮಾಡಿಸಲಾಗುವುದು ಎಂದು ಯತ್ನಾಳ್ ಹೇಳಿದರು.
ಹುಬ್ಳಳ್ಳಿ: ವಿಜಯಪುರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಹುಬ್ಬಳ್ಳಿಯಲ್ಲಿಂದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವಾಗ ಕರ್ನಾಟಕದಲ್ಲಿ ಬಿಜೆಪಿ ಪುನಃ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯ (Uttar Pradesh model government) ಸರ್ಕಾರ ಜಾರಿಗೆ ತರಲಾಗುವುದು ಎಂದು ಹೇಳಿದರು. ಅಲ್ಲಿನ ಪೊಲೀಸರು ಪದೇಪದೆ ಎನ್ ಕೌಂಟರ್ ಗಳನ್ನು (encounter) ನಡೆಸಿ ರೌಡಿ, ಗೂಂಡಾಗಳ ಕತೆ ಮುಗಿಸುವ ಹಾಗೆ ಕರ್ನಾಟಕದಲ್ಲಿ ಯಾರಾದರೂ ಭಾರತದ ಬಗ್ಗೆ, ಹಿಂದೂಗಳ ಬಗ್ಗೆ ಹಿಂದುತ್ವದ ಬಗ್ಗೆ ಮಾತಾಡಿದರೆ ಎನ್ ಕೌಂಟರ್ ಮಾಡಿಸಲಾಗುವುದು ಎಂದು ಹೇಳಿದರು. ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಗ್ಗೆ ಪುರಾವೆ ಕೇಳುವ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರ ಕೈಕಾಲು ಕಟ್ಟಿ ವಿಮಾನದಲ್ಲಿ ತುರುಕಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಸ್ಥಳಕ್ಕೆ ಕರೆದೊಯ್ದು ಬಿಸಾಡಬೇಕು ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ