Chikkanna: ‘ಉಪಾಧ್ಯಕ್ಷ’ ಶೂಟಿಂಗ್​ ಮುಕ್ತಾಯ: ಮಲೈಕಾ ಜತೆ ನಟಿಸಿದ ಅನುಭವ ಹಂಚಿಕೊಂಡ ನಟ ಚಿಕ್ಕಣ್ಣ

Chikkanna: ‘ಉಪಾಧ್ಯಕ್ಷ’ ಶೂಟಿಂಗ್​ ಮುಕ್ತಾಯ: ಮಲೈಕಾ ಜತೆ ನಟಿಸಿದ ಅನುಭವ ಹಂಚಿಕೊಂಡ ನಟ ಚಿಕ್ಕಣ್ಣ

TV9 Web
| Updated By: ಮದನ್​ ಕುಮಾರ್​

Updated on:Dec 27, 2022 | 8:01 PM

Upadhyaksha Kannada Movie: ‘ಉಪಾಧ್ಯಕ್ಷ’ ಸಿನಿಮಾದಲ್ಲಿ ಚಿಕ್ಕಣ್ಣ ಅವರಿಗೆ ಜೋಡಿಯಾಗಿ ಮಲೈಕಾ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶೂಟಿಂಗ್​ ಮುಗಿದಿದ್ದು, ಶೀಘ್ರದಲ್ಲೇ ಟೀಸರ್​ ರಿಲೀಸ್​ ಆಗಲಿದೆ.

ಹಾಸ್ಯ ನಟ ಚಿಕ್ಕಣ್ಣ ಅವರು ಹೀರೋ ಆಗಿ ನಟಿಸುತ್ತಿರುವ ‘ಉಪಾಧ್ಯಕ್ಷ’ ಸಿನಿಮಾ (Upadhyaksha Movie) ಶೂಟಿಂಗ್​ ಮುಕ್ತಾಯ ಆಗಿದೆ. ಈ ಸಿನಿಮಾದಲ್ಲಿ ಧರ್ಮಣ್ಣ, ಶಿವರಾಜ್​ ಕೆ.ಆರ್​. ಪೇಟೆ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಚಿಕ್ಕಣ್ಣ ಅವರಿಗೆ ಜೋಡಿಯಾಗಿ ಹೊಸ ನಟಿ ಮಲೈಕಾ ಅಭಿನಯಿಸಿದ್ದಾರೆ. ಅವರ ಬಗ್ಗೆ ಚಿಕ್ಕಣ್ಣ ಮಾತನಾಡಿದ್ದಾರೆ. ‘ನಮ್ಮ ಸಿನಿಮಾ ಕಥೆಗೆ ಮಲೈಕಾ ಹೇಳಿ ಮಾಡಿಸಿದಂತೆ ಇದ್ದಾರೆ. ತುಂಬಾ ಚೆನ್ನಾಗಿ ನಟಿಸಿದ್ದಾರೆ. ನಟಿಯರು ಕಾಮಿಡಿ ಮಾಡೋದು ಕಷ್ಟ. ಆದ್ರೂ ಅವರು ಹೆಚ್ಚು ಟೇಕ್​ ತೆಗೆದುಕೊಂಡಿಲ್ಲ’ ಎಂದು ಚಿಕ್ಕಣ್ಣ ಹೇಳಿದ್ದಾರೆ. ಶೀಘ್ರದಲ್ಲೇ ‘ಉಪಾಧ್ಯಕ್ಷ’ ಸಿನಿಮಾದ ಟೀಸರ್​​ ಬಿಡುಗಡೆ ಮಾಡುವುದಾಗಿ ಚಿಕ್ಕಣ್ಣ (Chikkanna) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Dec 27, 2022 08:01 PM