ಫೋನ್ ಚೆಕ್​ ಮಾಡುವಂತೆ ಉಪಲೋಕಾಯುಕ್ತ ಜಡ್ಜ್ ಸೂಚನೆ: ಕಕ್ಕಾಬಿಕ್ಕಿಯಾದ ಪಂಚಾಯ್ತಿ ಸಿಬ್ಬಂದಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 09, 2024 | 6:29 PM

ಅಕ್ರಮ ನಡೆದಿರುವ ಹಿನ್ನೆಲೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಗ್ರಾಮ ಪಂಚಾಯಿತಿಗೆ ಇಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ದಿಢೀರ್​ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆನ್ ಲೈನ್​ ಮೂಲಕ ಲಂಚ ತೆಗೆದುಕೊಳ್ಳುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಸಿಬ್ಬಂದಿಗಳ ಮೊಬೈಲ್ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಆನೇಕಲ್, ಆಗಸ್ಟ್​ 09: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಗ್ರಾಮ ಪಂಚಾಯಿತಿಗೆ ಇಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ (K.N.Phaneendra) ದಿಢೀರ್​ ಭೇಟಿ ನೀಡಿದ್ದಾರೆ. ಪಂಚಾಯತಿಯಲ್ಲಿ ಹಲವು ಅಕ್ರಮ ನಡೆದಿರುವ ಹಿನ್ನೆಲೆ ಭೇಟಿ ನೀಡಿ ಕಡತಗಳ ಪರಿಶೀಲನೆ ಮಾಡಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ಅಧಿಕಾರಿಗಳು ಸೂಕ್ತ ದಾಖಲೆ ನೀಡಿರಲಿಲ್ಲ. ಬೋರ್​ವೆಲ್, ನಕಲಿ ಖಾತೆ ಸೇರಿದಂತೆ ಹಲವು ಅಕ್ರಮ ನಡೆದಿತ್ತು. ಆನ್ ಲೈನ್​ ಮೂಲಕ ಲಂಚ ತೆಗೆದುಕೊಳ್ಳುತ್ತಿರುವ ಬಗ್ಗೆ ಪರಿಶೀಲನೆಗಾಗಿ ಅಧಿಕಾರಿಗಳಿಗೆ ಸಿಬ್ಬಂದಿಗಳ ಮೊಬೈಲ್ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಹಾಜರಾತಿ ಬುಕ್, ದಾಖಲೆಗಳನ್ನ ಸರಿಯಾದ ಪ್ರೋಸಿಜರ್ ಮಾಡಿಲ್ಲ. ಹಾಗಾಗಿ ಅಧಿಕಾರಿಗಳಿಗೆ ಉಪಲೋಕಾಯುಕ್ತ ಫಣೀಂದ್ರ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಚೇರಿಗೆ ಬರುವಾಗ ಅಧಿಕಾರಿಗಳ ಬಳಿ ಹಣ ಎಷ್ಟಿತ್ತು ಎನ್ನುವದನ್ನ ಬುಕ್​ನಲ್ಲಿ ಎಂಟ್ರಿ ಮಾಡಿಲ್ಲ. ಕಚೇರಿಗೆ ಬರುವಾಗ ಹೋಗುವಾಗ ಹಣ ಎಷ್ಟಿದೆ ಎಂದು ಎಂಟ್ರಿ ಮಾಡಬೇಕು. ನಿನ್ನೆ ದಾಳಿ ವೇಳೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ‌ ಬಳಿ ಹೆಚ್ಚುವರಿ ಹಣ ಕಂಡು ಬಂದಿತ್ತು.

ಪಂಚಾಯತಿಗೆ ಸಂಬಂಧ ಪಟ್ಟ ಅಂಗಡಿಗೆ ಬಾಡಿಗೆ ಕಲೆಕ್ಟ್ ಮಾಡಿಲ್ಲ. ಲಕ್ಷಾಂತರ ರೂ. ಬಾಡಿಗೆ ಹಣ ಬಾಕಿ ಇದೆ. ಅಂತವರ ವಿರುದ್ಧ ನೋಟಿಸ್ ಕೊಟ್ಟು ಕ್ರಮ ಆಗಿಲ್ಲ. ಅಧಿಕಾರಿಗಳು ಶಾಮೀಲಾಗಿರುವುದು ಕಾಣುತ್ತಿದೆ. ಬೀದಿ ಬದಿ ಅಂಗಡಿಗಳ ತೆರವು ಕಾರ್ಯಾಚರಣೆ ಯಾಕೆ ಮಾಡಿಲ್ಲ. ವ್ಯಾಪಾರಿಗಳಿಗಾಗಿ ಸೂಕ್ತ ವ್ಯವಸ್ಥೆ ಮಾಡಿಲ್ಲ. ಮಾಡಿದ್ರೆ ಪಂಚಾಯತಿ ತೆರಿಗೆ ಹಣ ಬರುತ್ತಿತ್ತು. ಜನಪ್ರತಿನಿಧಿಗಳ ಒತ್ತಡ ಅಂತ ಹೇಳಿದ ಪಿಡಿಓ ರಮೇಶ್​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.