ಮರುಬಿಡುಗಡೆ ಆದ ‘A’ ಚಿತ್ರ ಹೌಸ್​ಫುಲ್; ಅಭಿಮಾನಿಗಳು ಉಪ್ಪಿ ಸಿನಿಮಾನ ಹೇಗೆ ಸ್ವಾಗತಿಸಿದ್ರು ನೋಡಿ      

ಮರುಬಿಡುಗಡೆ ಆದ ‘A’ ಚಿತ್ರ ಹೌಸ್​ಫುಲ್; ಅಭಿಮಾನಿಗಳು ಉಪ್ಪಿ ಸಿನಿಮಾನ ಹೇಗೆ ಸ್ವಾಗತಿಸಿದ್ರು ನೋಡಿ      

ರಾಜೇಶ್ ದುಗ್ಗುಮನೆ
|

Updated on: May 17, 2024 | 8:07 AM

ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ ‘A’ ಸಿನಿಮಾ ಇಂದು (ಮೇ 17) ಮರುಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಮುಂಜಾನೆ 6 ಗಂಟೆಗೆ ಶೋ ಇಡಲಾಗಿತ್ತು. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.

ಹೊಸ ಸಿನಿಮಾಗಳ ಅಬ್ಬರ ಇಲ್ಲದ ಕಾರಣ ಹಳೆಯ ಕಲ್ಟ್ ಕ್ಲಾಸಿಕ್ ಸಿನಿಮಾಗಳು ರೀ-ರಿಲೀಸ್ ಆಗುತ್ತಿವೆ. ಉಪೇಂದ್ರ (Upendra) ನಿರ್ದೇಶಿಸಿ, ನಟಿಸಿದ್ದ ‘A’ ಸಿನಿಮಾ ಇಂದು (ಮೇ 17) ಮರುಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಮುಂಜಾನೆ 6 ಗಂಟೆಗೆ ಶೋ ಇಡಲಾಗಿತ್ತು. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಇಂದು ಮುಂಜಾನೆ ಬೆಂಗಳೂರಿನಾದ್ಯಂತೆ ಮಳೆ ಆಗುತ್ತಿದೆ. ಮಳೆಯ ನಡುವೆಯೂ ಥಿಯೇಟರ್​ಗೆ ಜನ ಬಂದಿದ್ದಾರೆ. ಫ್ಯಾನ್ಸ್ ಬೆಳ್ಳಂ ಬೆಳಗ್ಗೇನೆ ಬಂದು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಉಪ್ಪಿ ಎಂಟ್ರಿಗೆ ಫ್ಯಾನ್ಸ್ ಶಿಳ್ಳೆ ಹಾಕಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.