Kabzaa 2: ಕಬ್ಜ 2 ಗೆ ಆರ್ ಚಂದ್ರು ಮಗನೇ ಹೀರೋ! ಇದೇನಿದು ಉಪ್ಪಿ ಹೇಳಿದ ಹೊಸ ಸುದ್ದಿ
ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಇಂದಷ್ಟೆ (ಮಾರ್ಚ್ 17) ಬಿಡುಗಡೆ ಆಗಿದ್ದು ಮೊದಲ ದಿನ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ನೋಡಿದವರು ಕಬ್ಜ 2 ಬಗ್ಗೆ ಕುತೂಲಹ ವ್ಯಕ್ತಪಡಿಸಿದ್ದಾರೆ. ಆದರೆ ಕಬ್ಜ 2 ನಲ್ಲಿ ಉಪೇಂದ್ರ ಇರಲ್ವ!?
ಆರ್.ಚಂದ್ರು (R Chandru) ನಿರ್ದೇಶನದ ಕಬ್ಜ (Kabzaa) ಸಿನಿಮಾ ಇಂದಷ್ಟೆ (ಮಾರ್ಚ್ 17) ಬಿಡುಗಡೆ ಆಗಿದ್ದು ಮೊದಲ ದಿನ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ನೋಡಿದ ಬಹುತೇಕರು ಕಬ್ಜ 2 ಬೇಗ ಬರಲಿ ಎಂದಿದ್ದಾರೆ. ಈ ನಡುವೆ ಸಿನಿಮಾದ ನಾಯಕ ಉಪೇಂದ್ರ (Upendra) ಟ್ವಿಸ್ಟ್ ಒಂದನ್ನು ನೀಡಿದ್ದಾರೆ. ಕಬ್ಜ ಸಿನಿಮಾದಲ್ಲಿ ಉಪೇಂದ್ರದ ಬಾಲ್ಯದ ಪಾತ್ರದಲ್ಲಿ ಆರ್.ಚಂದ್ರು ನಟಿಸಿದ್ದಾರೆ. ಇದರ ಬಗ್ಗೆ ಮಾತನಾಡುತ್ತಾ, ಕಬ್ಜ 2 ನಲ್ಲಿ ಆರ್.ಚಂದ್ರು ಮಗನೇ ನಾಯಕ ಎಂದಿದ್ದಾರೆ.