ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು

ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು

ಮಂಜುನಾಥ ಸಿ.
|

Updated on: Sep 17, 2024 | 4:35 PM

Upendra-Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಬಂಧನವಾಗಿ ಮೂರು ತಿಂಗಳಾಗಿದೆ. ಈ ಹಿಂದೆ ಪ್ರಕರಣದ ಪಾರದರ್ಶಕ ವಿಚಾರಣೆಗೆ ಒತ್ತಾಯಿಸಿ ಪೋಸ್ಟ್ ಹಾಕಿದ್ದ ಉಪೇಂದ್ರ ಇದೀಗ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ ಮೂರು ತಿಂಗಳಿಗೂ ಹೆಚ್ಚು ಸಮಯವಾಗಿದೆ. ದರ್ಶನ್ ಪ್ರಕರಣದ ಬಗ್ಗೆ ಚಿತ್ರರಂಗದ ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಟ್ವೀಟ್ ಮಾಡಿದ್ದ ಉಪೇಂದ್ರ, ದರ್ಶನ್ ಪ್ರಕರಣದ ತನಿಖೆ, ವಿಚಾರಣೆ ಎಲ್ಲವೂ ಪಾರದರ್ಶಕವಾಗಿರಬೇಕು ಎಂದಿದ್ದರು. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಉಪೇಂದ್ರ ತಮ್ಮ ಅಭಿಪ್ರಾಯವನ್ನು ಪುನರಾವರ್ತಿಸಿರುವ ಜೊತೆಗೆ ದರ್ಶನ್ ಪ್ರಕರಣದ ಬಗ್ಗೆ ವೈಯಕ್ತಿಕ ಅಭಿಪ್ರಾಯವನ್ನು ಸಹ ಹಂಚಿಕೊಂಡಿದ್ದಾರೆ. ಅಲ್ಲದೆ ಪ್ರಕರಣದ ಬೆಳಕಿಗೆ ಬಂದಾಗ ತಮಗೆ ಅನಿಸಿದ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ