‘ಬ್ರ್ಯಾಟ್’ ಸಿನಿಮಾ ನೋಡಿ ಸಿಕ್ಕಾಪಟ್ಟೆ ಮೆಚ್ಚಿಕೊಂಡ ರಿಯಲ್ ಸ್ಟಾರ್ ಉಪೇಂದ್ರ
ಶಶಾಂಕ್ ನಿರ್ದೇಶನದ ಬ್ರ್ಯಾಟ್ ಚಿತ್ರ ಹಿಟ್ ಆಗಿದೆ. ಈ ಸಿನಿಮಾ ವೀಕ್ಷಿಸಿದ ಸೆಲೆಬ್ರಿಟಿಗಳು ಸಹ ಮೆಚ್ಚುಗೆ ಸೂಚಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ನಟನೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಕೂಡ ಈಗ ‘ಬ್ರ್ಯಾಟ್’ ನೋಡಿದ್ದಾರೆ. ಅವರಿಗೆ ಈ ಚಿತ್ರ ತುಂಬ ಇಷ್ಟ ಆಗಿದೆ.
ಶಶಾಂಕ್ ನಿರ್ದೇಶನದ ‘ಬ್ರ್ಯಾಟ್’ (Brat) ಸಿನಿಮಾ ಹಿಟ್ ಆಗಿದೆ. ಈ ಸಿನಿಮಾ ನೋಡಿದ ಸೆಲೆಬ್ರಿಟಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರ ಅಭಿನಯಕ್ಕೆ ಫ್ಯಾನ್ಸ್ ಭೇಷ್ ಎಂದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಕೂಡ ಈಗ ‘ಬ್ರ್ಯಾಟ್’ ಸಿನಿಮಾ ವೀಕ್ಷಿಸಿದ್ದಾರೆ. ಅವರಿಗೆ ಈ ಸಿನಿಮಾ ಸಖತ್ ಇಷ್ಟ ಆಗಿದೆ. ನಿರ್ದೇಶಕ ಶಶಾಂಕ್ ಅವರ ಕೆಲಸಕ್ಕೆ ಉಪೇಂದ್ರ ಫುಲ್ ಮಾರ್ಕ್ಸ್ ನೀಡಿದ್ದಾರೆ. ‘ಶಶಾಂಕ್ ಅವರ ಜೊತೆ ನಾನು ತುಂಬಾ ಸ್ಕ್ರಿಪ್ಟ್ಗಳಲ್ಲಿ ಕೆಲಸ ಮಾಡಿದ್ದೇನೆ. ಬ್ಯಾಟಿಂಗ್ನಲ್ಲಿ ತೆಂಡುಲ್ಕರ್ ಮಿಸ್ ಹೊಡೆಯಲ್ಲ. ಅದೇ ರೀತಿ ಸ್ಕ್ರಿಪ್ಟ್ ವಿಷಯದಲ್ಲಿ ಶಶಾಂಕ್ ಮಿಸ್ ಹೊಡೆಯಲ್ಲ. ಕ್ರಿಕೆಟ್, ಬೆಟ್ಟಿಂಗ್ ಗೊತ್ತಿರುವವರಿಗೆ ಅತ್ಯುತ್ತಮ ಸಿನಿಮಾ ಇದು. ಕೊನೆಯ ಟ್ವಿಸ್ಟ್ ಯಾರೂ ನಿರೀಕ್ಷಿಸೋಕೆ ಆಗಲ್ಲ’ ಎಂದು ಉಪೇಂದ್ರ (Upendra) ಅವರು ಸಿನಿಮಾದ ಬಗ್ಗೆ ತಮ್ಮ ವಿಮರ್ಶೆ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.