AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಗೆ ಬಂದ ‘ಬ್ರ್ಯಾಟ್’ ನಟ ಡಾರ್ಲಿಂಗ್ ಕೃಷ್ಣ: ಮಾಳುಗೆ ಗುಡ್ ನ್ಯೂಸ್

ಇತ್ತೀಚೆಗೆ ಬಿಡುಗಡೆ ಆದ ಕನ್ನಡದ ‘ಬ್ರ್ಯಾಟ್’ ಸಿನಿಮಾಗೆ ರಾಜ್ಯಾದ್ಯಂತ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾದ ನಟ ಡಾರ್ಲಿಂಗ್ ಕೃಷ್ಣ, ನಿರ್ದೇಶಕ ಶಶಾಂಕ್ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಸಿನಿಮಾದ ಯಶಸ್ಸಿನ ಬಗ್ಗೆ ಅವರು ಖುಷಿ ಹಂಚಿಕೊಂಡರು. ಮಾಳು ಕ್ಯಾಪ್ಟನ್ ಎಂಬುದನ್ನೂ ಘೋಷಿಸಿದರು.

ಬಿಗ್ ಬಾಸ್ ಮನೆಗೆ ಬಂದ ‘ಬ್ರ್ಯಾಟ್’ ನಟ ಡಾರ್ಲಿಂಗ್ ಕೃಷ್ಣ: ಮಾಳುಗೆ ಗುಡ್ ನ್ಯೂಸ್
Malu Nipanal, Jahnavi, Darling Krishna
ಮದನ್​ ಕುಮಾರ್​
|

Updated on: Nov 07, 2025 | 11:01 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಆಟದಲ್ಲಿ 40 ದಿನಗಳು ಕಳೆದಿವೆ. ಈಗಾಗಲೇ ಕೆಲವು ಅತಿಥಿಗಳು ಬಿಗ್ ಬಾಸ್ ಮನೆಗೆ ಬಂದು ಹೋಗಿದ್ದಾರೆ. ಲೇಟೆಸ್ಟ್ ಆಗಿ ಬಂದಿರುವುದು ‘ಬ್ರ್ಯಾಟ್’ ಸಿನಿಮಾ (Brat) ತಂಡ. ಹೌದು, ನಿರ್ದೇಶಕ ಶಶಾಂಕ್ ಮತ್ತು ನಟ ಡಾರ್ಲಿಂಗ್ ಕೃಷ್ಣ ಅವರು ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬಂದಿದ್ದಾರೆ. ಸಿನಿಮಾದ ಬಗ್ಗೆ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಅಲ್ಲದೇ ಈ ವಾರದ ಕ್ಯಾಪ್ಟನ್ ಯಾರು ಎಂಬುದನ್ನು ಕೂಡ ಘೋಷಿಸಿದ್ದಾರೆ. ಮಾಳು ನಿಪನಾಳ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ಮನೆಯ ಸದಸ್ಯರ ಎದುರಲ್ಲಿ ಈ ವಿಷಯವನ್ನು ಡಾರ್ಲಿಂಗ್ ಕೃಷ್ಣ (Darling Krishna) ಅವರು ಬಹಿರಂಗಪಡಿಸಿದ್ದಾರೆ.

ಸಿಂಗರ್ ಮಾಳು ನಿಪನಾಳ ಅವರು ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದರು. ಅವರು ಮಾತನಾಡುವುದೇ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಈ ವಾರದಲ್ಲಿ ಅಭಿಮಾನಿಗಳು ಬಿಗ್ ಬಾಸ್ ಮನೆಯ ಒಳಗೆ ಬಂದಾಗ ಮಾಳು ಅವರು ಖಡಕ್ ಆಗಿ ಮಾತನಾಡಿದರು. ಅದರ ಪರಿಣಾಮದಿಂದ ಮಾಳು ಅವರಿಗೆ ಅಭಿಮಾನಿಗಳು ಹೆಚ್ಚು ವೋಟ್ ಹಾಕಿದ್ದಾರೆ. ಇದರಿಂದಾಗಿ ಮಾಳುಗೆ ಕ್ಯಾಪ್ಟನ್ ಪಟ್ಟ ಸಿಕ್ಕಿದೆ.

ಈ ವಾರ ಇಡೀ ಮನೆ ನಾಮಿನೇಟ್ ಆಗಿದೆ. ಅಲ್ಲದೇ ಸದಸ್ಯರಿಗೆ ಯಾವುದೇ ಟಾಸ್ಕ್ ಕೂಡ ನೀಡಿಲ್ಲ. ಕೇವಲ ಎಲ್ಲ ಸ್ಪರ್ಧಿಗಳ ವರ್ತನೆ ಮೇಲೆಯೇ ವೀಕ್ಷಕರು ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಮಾಳು ಅವರಿಗೆ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿರುವುದರಿಂದ ಹೆಚ್ಚು ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಕ್ಯಾಪ್ಟನ್ ಪಟ್ಟ ಪಡೆದ್ದಿದ್ದಕ್ಕೆ ಅಶ್ವಿನಿ ಗೌಡ, ಜಾಹ್ನವಿ, ಗಿಲ್ಲಿ ನಟ ಮುಂತಾದವರು ಸಂತಸ ಪಟ್ಟಿದ್ದಾರೆ.

ಕ್ಯಾಪ್ಟನ್ ಪಟ್ಟ ಪಡೆದಿರುವ ಮಾಳು ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಕ್ಯಾಪ್ಟನ್ ಆಗುವುದು ಅಷ್ಟು ಸುಲಭ ಅಲ್ಲ. ಅತಿರೇಕವಾಗಿ ವರ್ತಿಸುವ ಎಲ್ಲ ಸ್ಪರ್ಧಿಗಳನ್ನು ನಿಭಾಯಿಸಬೇಕಾಗುತ್ತದೆ. ಇಷ್ಟು ದಿನಗಳ ಕಾಲ ಮಾತನಾಡಲು ಹಿಂದೇಟು ಹಾಕುತ್ತಿದ್ದ ಅವರು ಈಗ ಕ್ಯಾಪ್ಟನ್ ಆಗಿರುವುದರಿಂದ ಜೋರಾಗಿ ಮಾತನಾಡಲೇಬೇಕಿದೆ.

ಇದನ್ನೂ ಓದಿ: ‘ಬ್ರ್ಯಾಟ್’ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಶಶಾಂಕ್ ಮುಖದಲ್ಲಿ ಮೂಡಿತು ನಗು

ಡಾರ್ಲಿಂಗ್ ಕೃಷ್ಣ ಅವರು ಬಿಗ್ ಬಾಸ್ ಮನೆ ಒಳಗೆ ಬಂದಾಗ ಎಲ್ಲರಿಗೂ ಖುಷಿ ಆಯಿತು. ‘ಬ್ರ್ಯಾಟ್’ ಸಿನಿಮಾದ ಸೂಪರ್ ಹಿಟ್ ‘ನಾನೇ ನೀನಂತೆ..’ ಹಾಡನ್ನು ಪ್ಲೇ ಮಾಡಲಾಯಿತು. ಬಳಿಕ ‘ಗಂಗಿ ಗಂಗಿ..’ ಹಾಡು ಕೂಡ ಬಂತು. ಸಿನಿಮಾ ಎಲ್ಲ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಎಂಬುದನ್ನು ನಿರ್ದೇಶಕ ಶಶಾಂಕ್ ಅವರು ತಿಳಿಸಿದರು. ಅಲ್ಲದೇ ಸಿನಿಮಾದ ವಿಶೇಷತೆಗಳ ಬಗ್ಗೆಯೂ ಅವರು ಮಾತನಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪಿಸ್ತೂಲ್ ಇಟ್ಟುಕೊಂಡ ಬಂದ ಜೆಡಿಎಸ್ ಕಾರ್ಯಕರ್ತ, ವಿಡಿಯೋ ವೈರಲ್
ಪಿಸ್ತೂಲ್ ಇಟ್ಟುಕೊಂಡ ಬಂದ ಜೆಡಿಎಸ್ ಕಾರ್ಯಕರ್ತ, ವಿಡಿಯೋ ವೈರಲ್
ಅನಂತ್​​ ಕುಮಾರ್​​ ಹೆಗಡೆ ಮರಳಿ ರಾಜಕೀಯಕ್ಕೆ? ಶ್ರೀರಾಮುಲು ಹೇಳಿದ್ದಿಷ್ಟು
ಅನಂತ್​​ ಕುಮಾರ್​​ ಹೆಗಡೆ ಮರಳಿ ರಾಜಕೀಯಕ್ಕೆ? ಶ್ರೀರಾಮುಲು ಹೇಳಿದ್ದಿಷ್ಟು
ದೆಹಲಿ ಅಬಕಾರಿ ನೀತಿ ಹಗರಣ, ಸಿಬಿಐಗೆ ದೆಹಲಿ ನ್ಯಾಯಾಲಯ ತರಾಟೆ
ದೆಹಲಿ ಅಬಕಾರಿ ನೀತಿ ಹಗರಣ, ಸಿಬಿಐಗೆ ದೆಹಲಿ ನ್ಯಾಯಾಲಯ ತರಾಟೆ
ಮಾ.03 ಚಂದ್ರಗ್ರಹಣ; ಧನಸ್ಸು ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; ಧನಸ್ಸು ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಮೌನ ಮುರಿದ ಡಿಕೆಶಿ: ಹೇಳಿದ್ದೇನು ನೋಡಿ!
ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಮೌನ ಮುರಿದ ಡಿಕೆಶಿ: ಹೇಳಿದ್ದೇನು ನೋಡಿ!
ಮಾ.03 ಚಂದ್ರಗ್ರಹಣ; ವೃಶ್ಚಿಕ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; ವೃಶ್ಚಿಕ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಇದು ಕೆಸರು ಗದ್ದೆಯಲ್ಲ, ಹಾವೇರಿ-ಶಿರಸಿ ರಾಜ್ಯ ಹೆದ್ದಾರಿ!
ಇದು ಕೆಸರು ಗದ್ದೆಯಲ್ಲ, ಹಾವೇರಿ-ಶಿರಸಿ ರಾಜ್ಯ ಹೆದ್ದಾರಿ!
ಎಐಎಡಿಎಂಕೆಯ ಉಚ್ಚಾಟಿತ ನಾಯಕ ಪನ್ನೀರ್​​ಸೆಲ್ವಂ ಡಿಎಂಕೆಗೆ ಸೇರ್ಪಡೆ
ಎಐಎಡಿಎಂಕೆಯ ಉಚ್ಚಾಟಿತ ನಾಯಕ ಪನ್ನೀರ್​​ಸೆಲ್ವಂ ಡಿಎಂಕೆಗೆ ಸೇರ್ಪಡೆ
ಜಿಮ್ ಸೇರಿದ ವಾರದಲ್ಲೇ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಹೃದಯಾಘಾತದಿಂದ ಸಾವು
ಜಿಮ್ ಸೇರಿದ ವಾರದಲ್ಲೇ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಹೃದಯಾಘಾತದಿಂದ ಸಾವು
ಮಾ.03ರ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಹಣ, ಸಂಪತ್ತು, ಖ್ಯಾತಿ ಅರಸಿ ಬರಲಿದೆ!
ಮಾ.03ರ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಹಣ, ಸಂಪತ್ತು, ಖ್ಯಾತಿ ಅರಸಿ ಬರಲಿದೆ!