Vikrant Rona: ‘ಇಂಥ ಸಿನಿಮಾ ಹೆಂಗ್ರಿ ಮಾಡ್ತೀರಾ? ಎಲ್ಲಿಂದ ಧೈರ್ಯ ಬರತ್ತೆ?’: ಕಿಚ್ಚನಿಗೆ ಉಪ್ಪಿಯ ಬಹಿರಂಗ ಪ್ರಶ್ನೆ
ಝಗಮಗಿಸುವ ವೇದಿಕೆಯಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ವೇದಿಕೆಯಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ನಡುವಿನ ಮಾತುಕತೆ ಗಮನ ಸೆಳೆಯಿತು.
ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆದಿದೆ. ಜುಲೈ 26ರ ಸಂಜೆ ಬೆಂಗಳೂರಿನ ಲುಲು ಗ್ಲೋಬಲ್ ಮಾಲ್ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಉಪೇಂದ್ರ (Upendra) ಅತಿಥಿಯಾಗಿ ಆಗಮಿಸಿದ್ದರು. ಈಗಾಗಲೇ ಅವರು ‘ವಿಕ್ರಾಂತ್ ರೋಣ’ ಚಿತ್ರವನ್ನು ನೋಡಿದ್ದಾರೆ. ವೇದಿಕೆಯಲ್ಲಿ ಕಿಚ್ಚ ಸುದೀಪ್ಗೆ ಉಪ್ಪಿ ಕೆಲವು ಪ್ರಶ್ನೆ ಕೇಳಿದರು. ‘ಇಂಥ ಸಿನಿಮಾ ಹೆಂಗ್ರಿ ಮಾಡ್ತೀರಾ? ಧೈರ್ಯ ಎಲ್ಲಿಂದ ಬರುತ್ತೆ?’ ಎಂದು ಅವರು ಕೇಳಿದರು. ‘ನಿರ್ಮಾಪಕ ಜಾಕ್ ಮಂಜು ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಆಯ್ಕೆ ಮಾಡಿಕೊಂಡಿದ್ದೇ ನನ್ನ ಬೆಸ್ಟ್ ನಿರ್ಧಾರ. ನಂತರ ಸುಲಭವಾಗಿ ಸಿನಿಮಾ ಮಾಡಿದೆ’ ಎಂದು ಸುದೀಪ್ (Kichcha Sudeep) ಉತ್ತರಿಸಿದರು.
Published on: Jul 27, 2022 01:44 PM