ಬಸವ ಜಯಂತಿ ಮೆರವಣಿಗೆಯಲ್ಲಿ ಕಿರಿಕ್; ಪೊಲೀಸರಿಂದ ಲಘು ಲಾಠಿ ಪ್ರಹಾರ
ಚಾಮರಾಜನಗರ(Chamarajanagar)ದ ಸುಲ್ತಾನ್ ಷರೀಪ್ ಸರ್ಕಲ್‌ನಲ್ಲಿ ಇಂದು(ಜೂ.06) ನಡೆದಿದ್ದ ಬಸವ ಜಯಂತಿ(Basava jayanti) ಮೆರವಣಿಗೆ ವೇಳೆ ಪೊಲೀಸರು ಹಾಗೂ ಮೆರವಣಿಗೆಕಾರರ ನಡುವೆ ಗಲಾಟೆ ಆಗಿದೆ. ಮೆರವಣಿಗೆ ವೇಳೆ ಡಿಜೆ ಹಾಕಿದ್ದಕ್ಕೆ ಪೊಲೀಸರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಿನ್ನಲೆ ರೊಚ್ಚಿಗೆದ್ದ ವೀರಶೈವ ಲಿಂಗಾಯತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಚಾಮರಾಜನಗರ, ಜೂ.06: ಚಾಮರಾಜನಗರ(Chamarajanagar)ದ ಸುಲ್ತಾನ್ ಷರೀಪ್ ಸರ್ಕಲ್‌ನಲ್ಲಿ ಇಂದು(ಜೂ.06) ನಡೆದಿದ್ದ ಬಸವ ಜಯಂತಿ(Basava jayanti) ಮೆರವಣಿಗೆ ವೇಳೆ ಪೊಲೀಸರು ಹಾಗೂ ಮೆರವಣಿಗೆಕಾರರ ನಡುವೆ ಗಲಾಟೆ ಆಗಿದೆ. ಮೆರವಣಿಗೆ ವೇಳೆ ಡಿಜೆ ಹಾಕಿದ್ದಕ್ಕೆ ಪೊಲೀಸರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಿನ್ನಲೆ ರೊಚ್ಚಿಗೆದ್ದ ವೀರಶೈವ ಲಿಂಗಾಯತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದವರ ನಡುವೆ ತಳ್ಳಟಾ ನೂಕಾಟ ಶುರುವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪರಿಣಾಮ ಸುಲ್ತಾನ್ ಷರೀಫ್ ವೃತ್ತದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ವೃತ್ತದಲ್ಲೇ ನಿಂತ ಮೆರವಣಿಗೆ ವಾಹನದಿಂದ ಸಂಚಾರ ಅಸ್ತವ್ಯಸ್ತವಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos