ಬೆಂಬಲ ಬೆಲೆ ಆಗ್ರಹಿಸಿ ಕೈಯಲ್ಲಿ ಕೊಬ್ಬರಿ ಚೀಲ ಹಿಡಿದು ಜಿಲ್ಲಾಧಿಕಾರಿ ಕಚೇರಿಗೆ ಬಂದ ಹೆಚ್ ಡಿ ರೇವಣ್ಣ

|

Updated on: Dec 02, 2023 | 7:21 PM

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಪ್ರತಿ ಕ್ವಿಂಟಾಲ್ ಗೆ ರೂ. 15,000 ಬೆಂಬಲ ಬೆಲೆ ನೀಡುವ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ಸಿದ್ದರಾಮಯ್ಯ ರೈತರಿಗೆ ನೀಡಿದ ಬರವಸೆ ಈಡೇರಿಸಿಲ್ಲ. ಹಾಗಾಗೇ, ರೇವಣ್ಣ ತೆಂಗಿನಕಾಯಿ ಬೆಳೆಗಾರರೊಂದಿಹೆ ಕೈಯಲ್ಲಿ ಕೊಬ್ಬರಿ ಚೀಲಗಳನ್ನು ಹೊತ್ತು ಬಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಹಾಸನ: ಯಾವಾಗಲೂ ಕೈಯಲ್ಲಿ ನಿಂಬೆಹಣ್ಣು ಹಿಡಿಯುವ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಫಾರ್ ಎ ಚೇಂಜ್ ಇವತ್ತು ಕೊಬ್ಬರಿ ಚೀಲ (coconut bag) ಹಿಡಿದಿದ್ದರು! ಅದಕ್ಕೆ ಕಾರಣ ಇಲ್ಲದಿಲ್ಲ. ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಅವರು ಹಲವಾರು ತೆಂಗಿನಕಾಯಿ ಬೆಳೆಗಾರರೊಂದಿಗೆ ಹಾಸನ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಪ್ರದರ್ಶನ ನಡೆಸಿದರು. ವಿಷಯವೇನೆಂದರೆ, ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ದಿನೇದಿನೆ ಕಡಿಮೆಯಾಗುತ್ತಿದ್ದು ಈಗ ಕ್ವಿಂಟಾಲ್ ಗೆ ರೂ. 7,000 ರಷ್ಟಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Siddaramaiah government) ಚುನಾವಣೆ ಸಮಯದಲ್ಲಿ ಪ್ರತಿ ಕ್ವಿಂಟಾಲ್ ಗೆ ರೂ. 15,000 ಬೆಂಬಲ ಬೆಲೆ ನೀಡುವ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ಸಿದ್ದರಾಮಯ್ಯ ರೈತರಿಗೆ ನೀಡಿದ ಬರವಸೆ ಈಡೇರಿಸಿಲ್ಲ. ಹಾಗಾಗೇ, ರೇವಣ್ಣ ತೆಂಗಿನಕಾಯಿ ಬೆಳೆಗಾರರೊಂದಿಹೆ ಕೈಯಲ್ಲಿ ಕೊಬ್ಬರಿ ಚೀಲಗಳನ್ನು ಹೊತ್ತು ಬಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾದಿಕಾರಿ ಅವರ ಮನವಿ ಪತ್ರ ಸ್ವೀಕರಿಸಿದ್ದು ಸರ್ಕಾರಕ್ಕೆ ಕಳಿಸುತ್ತೇನೆಂದು ಹೇಳಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 02, 2023 07:18 PM