Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Session: ಹೆಚ್ ಡಿ ರೇವಣ್ಣ ಕೈಯಲ್ಲಿ ನಿಂಬೆಹಣ್ಣು ಬದಲು ಕೊಬ್ಬರಿ ಕಂಡ ಸಿದ್ದರಾಮಯ್ಯ ಛೇಡಿಸಿದರು!

Assembly Session: ಹೆಚ್ ಡಿ ರೇವಣ್ಣ ಕೈಯಲ್ಲಿ ನಿಂಬೆಹಣ್ಣು ಬದಲು ಕೊಬ್ಬರಿ ಕಂಡ ಸಿದ್ದರಾಮಯ್ಯ ಛೇಡಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 13, 2023 | 6:37 PM

ಗುರುವಾರ ರೇವಣ್ಣ ಸದನಕ್ಕೆ ಆಗಮಿಸಿದಾಗ ಅವರ ಕೈಯಲ್ಲಿ ಎರಡು ಕೊಬ್ಬರಿಗಳಿದ್ದವು!

ಬೆಂಗಳೂರು: ಜೆಡಿಎಸ್ ಪಕ್ಷದ ಶಾಸಕ ಹೆಚ್ ಡಿ ರೇವಣ್ಣ (HD Revanna) ಮಾತಾಡಲು ಎದ್ದು ನಿಂತಾಗೆಲ್ಲ ಒಂದು ಗಂಭೀರವಾದ ಸಮಸ್ಯೆಯನ್ನು ಸದನದ ಗಮನಕ್ಕೆ ತರುತ್ತಾರೆ. ಆದರೆ ಇಂದು ರೈತರ ಸಮಸ್ಯೆಯನ್ನು ಡೆಮೋ ಮಾಡುವ ಮೂಲಕ ಹೇಳಿವ ಪ್ರಯತ್ನ ಮಾಡಿದರು. ರೇವಣ್ಣ ಮಹಾನ್ ದೈವಭಕ್ತರು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ ಮತ್ತು ಕೆಲ ನಂಬಿಕೆಗಳನ್ನು (ವಿರೋಧಿಗಳು ಮೂಢನಂಬಿಕೆ ಅನ್ನುತ್ತಾರೆ) ಅವರು ಪಾಲಿಸುತ್ತಾರೆ. ಕೈಯಲ್ಲಿ ಸದಾ ನಿಂಬೆಹಣ್ಣು (lemon) ಹಿಡಿದಿರುವುದನ್ನು ಎಲ್ಲರೂ ಗಮನಿಸಿದ್ದಾರೆ, ಗುರುವಾರ ಅವರು ಸದನಕ್ಕೆ ಆಗಮಿಸಿದಾಗ ಅವರ ಕೈಯಲ್ಲಿ ಎರಡು ಕೊಬ್ಬರಿಗಳಿದ್ದವು (coconuts)! ಅವರು ಅವುಗಳನ್ನು ಸದನಕ್ಕೆ ತಂದಿದ್ದು ರೈತರ ಸಮಸ್ಯೆಯನ್ನು ಪ್ರಸ್ತಾಪಿಸಲು, ಅದರೆ ಅವರು ಮಾಡಿದ್ದು ಸದನ ನಗುವಿಗೆ ಕಾರಣವಾಯಿತು. ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ಎದ್ದು ನಿಂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಏನ್ ರೇವಣ್ಣ ನಿಂಬೆಹಣ್ಣು ಬದಲಿಗೆ ಕೊಬ್ಬರಿ ಹಿಡಿದುಕೊಂಡು ಬಂದಿದ್ದೀಯಾ ಅಂತ ಹೇಳಿದಾಗ ಸದನ ನಗೆಗಡಲಲ್ಲಿ ಮುಳುಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ