Sign In

By signing in or creating an account, you agree with Associated Broadcasting Company's Terms & Conditions and Privacy Policy.

HDK Pendrive; ನಾನು ಹಿಟ್ ಅಂಡ್ ರನ್ ಕೇಸ್ ಅಲ್ಲ ಪೆನ್​ಡ್ರೈವ್ ಬಹಿರಂಗಗೊಳಿಸುವ ಸಮಯ ಬಂದಿಲ್ಲ: ಹೆಚ್ ಡಿ ಕುಮಾರಸ್ವಾಮಿ

HDK Pendrive; ನಾನು ಹಿಟ್ ಅಂಡ್ ರನ್ ಕೇಸ್ ಅಲ್ಲ ಪೆನ್​ಡ್ರೈವ್ ಬಹಿರಂಗಗೊಳಿಸುವ ಸಮಯ ಬಂದಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 13, 2023 | 5:09 PM

ಈಗಿನ ಕಾಂಗ್ರೆಸ್ ಸರ್ಕಾರದಡೆ ತನಗೆ ಸಾಫ್ಟ್ ಕಾರ್ನರ್ ಇಲ್ಲ ಎಂದ ಕುಮಾರಸ್ವಾಮಿ, ಬುಧವಾರ ಸದನದಲ್ಲಿ ಸರ್ಕಾರದ ಕಾರ್ಯಕ್ರಮಗಳಲ್ಲಿರುವ ನ್ಯೂನತೆಗಳನ್ನು ಎತ್ತಿ ತೋರುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು

ಬೆಂಗಳೂರು: ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಂದು ವಿಧಾನ ಸೌಧದ ಅವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಪೆನ್ ಡ್ರೈವ್ (pendrive) ಸಂಗತಿಯನ್ನು ಉಲ್ಲೇಖಿಸಿ ತಾವು ಹಿಟ್ ಅಂಡ್ ರನ್ (hit and run) ಪಾರ್ಟಿ ಅಲ್ಲ, ಪೆನ್ ಡ್ರೈವ್ ನಲ್ಲಿ ಒಂದಷ್ಟು ಮಾಹಿತಿ ಇದೆ ಅದನ್ನು ಬಹಿರಂಗಪಡಿಸಲು ಸಮಯವಿನ್ನೂ ಕೂಡಿ ಬಂದಿಲ್ಲ ಎಂದು ಹೇಳಿದರು. ಅದಲ್ಲದೆ ಕೆಲ ಸ್ನೇಹಿತರು ಮತ್ತು ಹಿತೈಷಿಗಳು, ಈಗಲೇ ಪೆನ್ ಡ್ರೈವ್ ಅನ್ನು ಬಹಿರಂಗಗೊಳಿಸಬೇಡಿ, ಇನ್ನಷ್ಟು ಸಂಗತಿಗಳು ನಿಮ್ಮ ಕೈಗೆ ಸಿಗಲಿ, ಆಮೇಲೆ ಎಲ್ಲವನ್ನು ಒಟ್ಟಿಗೆ ಸೇರಿಸಿ ಬಯಲು ಮಾಡಿ ಅಂತ ಸಲಹೆ ನೀಡಿದ್ದಾರೆ, ಹಾಗಾಗಿ ಸುಮ್ಮನಿದ್ದೇನೆ ಅಂತ ಹೇಳಿ ಮಾಧ್ಯಮದವರಿಗೆ ಯಾಕಿಷ್ಟು ಆತುರ ಅಂತ ಹೇಳಿದರು. ಕುಮಾರಸ್ವಾಮಿ ತಾವು ಹಿಟ್ ಅಂಡ್ ರನ್ ಕೇಸ್ ಅಲ್ಲವೆನ್ನುತ್ತಾರೆ, ಆದರೆ ಹಿಂದೆಯೂ ಅವರು ಹಲವಾರು ಆರೋಪಗಳನ್ನು ಮಾಡಿದ್ದರು, ಸಾಕ್ಷ್ಯ ಮತ್ತು ದಾಖಲೆ ಮಾತ್ರ ಒದಗಿಸಿರಲಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರದಡೆ ತನಗೆ ಸಾಫ್ಟ್ ಕಾರ್ನರ್ ಇಲ್ಲ ಎಂದ ಕುಮಾರಸ್ವಾಮಿ, ಬುಧವಾರ ಸದನದಲ್ಲಿ ಸರ್ಕಾರದ ಕಾರ್ಯಕ್ರಮಗಳಲ್ಲಿರುವ ನ್ಯೂನತೆಗಳನ್ನು ಎತ್ತಿ ತೋರುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ