ಎರಡು ದಶಕಗಳ ನಂತರ ಅಮೆರಿಕದ ಸೇನೆ ಅಫ್ಘಾನಿಸ್ತಾನದ ನೆಲ ಬಿಟ್ಟು ಸ್ವದೇಶಕ್ಕೆ ಮರಳಿತು, ಇನ್ನು ಅಲ್ಲಿ ತಾಲಿಬಾನ್ ಆಡಳಿತ

ಸಾವಿರಾರು ಅಮೇರಿಕನ್ನರನ್ನು ಕೊಂದ ಜಾಗತಿಕ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಮತ್ತು ಅವನ ಅಲ್ ಖೈದಾ ಸಂಘಟನೆಯ ಸಹಚರರನ್ನು ನಿರ್ನಾಮಗೊಳಿಸಲು ಅಮೇರಿಕ ಸೇನೆ ಅಪ್ಘಾನಿಸ್ತಾನಕ್ಕೆ 2001 ರಲ್ಲಿ ಬಂದಿತ್ತು.

ಅಮೆರಿಕದ ಸೇನೆ ತಾಲಿಬಾನಿಗಳು ನೀಡಿದ ಗಡುವಿಗಿಂತ ಒಂದು ದಿನ ಮೊದಲೇ ಅಫ್ಘಾನಿಸ್ತಾನವನ್ನಯ ತೆರವುಗೊಳಿಸಿ ಸ್ವದೇಶಕ್ಕೆ ಮರಳಿದೆ, ಬರೋಬ್ಬರಿ 20 ವರ್ಷಗಳ ನಂತರ ಅಫ್ಘಾನಿಸ್ತಾನದ ನೆಲದ ಮೇಲೆ ಒಬ್ಬೇ ಒಬ್ಬ ವಿದೇಶಿ ಮೂಲದ ಸೈನಿಕನಿಲ್ಲ. ಈ ಸನ್ನಿವೇಶ ತಾಲಿಬಾನಿಗಳಿಗೆ ಖುಷಿ ನೀಡಿದೆ. ಅಮೆರಿಕದ ಸೈನಿಕರು ನಮ್ಮೊಂದಿಗಿದ್ದಾರಲ್ಲ ಎಂಬ ಧೈರ್ಯದೊಂದಿಗೆ ಜೀವಿಸುತ್ತಿದ್ದ ಆಫ್ಘನ್ ಜನರಿಗೆ ಹೆದರಿಕೆ ಶುರುವಾಗಿದೆ, ಮುಂದೇನು ಅಂತ ಭೀತಿ ಕಾಡುತ್ತಿದೆ.

ತಾವೇ ಹುಟ್ಟುಹಾಕಿದ ದುಷ್ಟ ತಾಲಿಬಾನಿಗಳ ಕೈಗೆ ಅಫ್ಘಾನಿಸ್ತಾನವನ್ನು ಒಪ್ಪಿಸಿ ಅಮೆರಿಕದ ಸೇನೆ ತೆರಳಿದೆ. ಸಾವಿರಾರು ಅಮೇರಿಕನ್ನರನ್ನು ಕೊಂದ ಜಾಗತಿಕ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಮತ್ತು ಅವನ ಅಲ್ ಖೈದಾ ಸಂಘಟನೆಯ ಸಹಚರರನ್ನು ನಿರ್ನಾಮಗೊಳಿಸಲು ಅಮೇರಿಕ ಸೇನೆ ಅಪ್ಘಾನಿಸ್ತಾನಕ್ಕೆ 2001 ರಲ್ಲಿ ಬಂದಿತ್ತು. ಆದರೆ, ಲಾಡೆನ್ನನ್ನು ಹುಡುಕಿ ಕೊಲ್ಲಲು ಅದಕ್ಕೆ ಬರೋಬ್ಬರಿ ಒಂದು ದಶಕ ಬೇಕಾಯಿತು.

ಅವನನ್ನು ಕೊಂದ ಮೇಲೆ ಮತ್ತೊಂದು ದಶಕದ ಅವಧಿಗೆ ಯುಎಸ್ ಸೇನೆ ಅಲ್ಲೇ ನೆಲೆಸಿ ಸಾವಿರಾರು ತಾಲಿಬಾನಿ ಉಗ್ರರು, ಅಲ್ ಖೈದಾ ಉಗ್ರರನ್ನು ಕೊಂದಿತು. ಉಗ್ರರೊಂದಿಗಿನ ಹೋರಾಟದಲ್ಲಿ ಅದು ತನ್ನ 2,000 ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿತ್ತು.

ಕಳೆದ ವರ್ಷ ತಾಲಿಬಾನಿಳೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಅಮೆರಿಕ ತನ್ನ ಸೇನೆನಯನ್ನು ಸಂಪೂರ್ಣವಾಗಿ ವಾಪಸ್ಸು ಕರೆಸಿಕೊಂಡಿದೆ. ಸೋಮವಾರ ರಾತ್ರಿ ಅಫ್ಘಾನಿಸ್ತಾನದಿಂದ ಅಮೇರಿಕಾಗೆ ಹೊಟ ಕೊನೆ ವಿಮಾನ ಮತ್ತು ಅಂತಮ ಬ್ಯಾಚಿನ ಸೈನಿಕರು ಈ ವಿಡಿಯೋನಲ್ಲಿ ಕಾಣುತ್ತಿದ್ದಾರೆ.

ಇದನ್ನೂ ಓದಿ: ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್ ನೆಲದಲ್ಲಿ ಓಡಾಡುತ್ತಿರುವ ವಿಡಿಯೊ; ಪೈಲಟ್​​ಗಳಿಗೆ ತರಬೇತಿ ನೀಡುತ್ತಿದೆಯೇ ತಾಲಿಬಾನ್?

Click on your DTH Provider to Add TV9 Kannada