ತಾಲಿಬಾನ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಿರುತ್ತರರಾದರು ಅಮೆರಿಕ ಅಧ್ಯಕ್ಷ ಜೋ ಬೈಡನ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 25, 2021 | 9:34 PM

ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ವೇಗವಾಗಿ ಸಾಗುತ್ತಿದ್ದು ಆಗಸ್ಟ್ 31 ರೊಳಗೆ ಅದು ಪೂರ್ಣಗೊಳ್ಳಲಿದೆ ಅಂತ ಬೈಡನ್ ಈ ರಾಷ್ಟ್ರಗಳಿಗೆ ಹೇಳಿದರೆಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಅಫಘಾನಿಸ್ತಾನದ ಈಗಿನ ಸ್ಥಿತಿಗೆ ವಿಶ್ವದ ದೊಡ್ಡಣ್ಣ ಅಮೆರಿಕವೇ ಕಾರಣ ಅನ್ನೋದು ಎಲ್ಲರಿಗೋ ಗೊತ್ತಿರುವ ವಿಚಾರವೇ. ಅಫಘಾನಿಸ್ತಾನದಲ್ಲಿ ಬೀಡು ಬಿಟ್ಟಿದ್ದ ರಷ್ಯನ್ನರನ್ನು ಅಲ್ಲಿಂದ ಓಡಿಸಲು ಒಂದು ಚಿಕ್ಕ ಬಂಡುಕೋರರ ಗುಂಪಿಗೆ ಶಸ್ತ್ರಾಸ್ತ್ರ, ಹಣ ಮತ್ತು ಇತರ ನೆರವನ್ನು ಒದಗಿಸಿದ ಅಮೇರಿಕಗೆ ಆ ಗುಂಪು ಮುಂದೊಂದು ದಿನ ತಾಲಿಬಾನ್ ಹೆಸರಿನಲ್ಲಿ ತನಗೆ ಮುಳವಾದೀತು ಅನ್ನುವ ಪರಿಕಲ್ಪನೆಯೇ ಇರಲಿಲ್ಲ. ಈಗ ನೋಡಿ ಪರಿಸ್ಥಿತಿ ಹೇಗಿದೆ? ಅಫಘಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೊ ಸೇನೆಗಳು ತೆರವು ಮಾಡುವಂತೆ ತಾಲಿಬಾನ್ ಗಡುವು ನೀಡಿದೆ. ಆಗಸ್ಟ್ 31 ರೊಳಗೆ ಸೇನೆಗಳು ವಾಪಸ್ಸು ಹೋಗದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ತಾಲಿಬಾನ್ ಎಚ್ಚರಿಸುತ್ತಿದ್ದರೆ ದೊಡ್ಡಣ್ಣ ಕೋಲೆ ಬಸವನಂತೆ ತಲೆ ಅಲ್ಲಾಡಿಸುತ್ತಿದ್ದಾನೆ!

ಅಫಘಾನಿಸ್ತಾನದಲ್ಲಿ ತಲೆದೋರಿರುವ ಅರಾಜಕತೆ ಸ್ಥಿತಿಯನ್ನು ಚರ್ಚಿಸಲು ಜೋ ಬೈಡನ್ ಅವರು ಮಂಗಳವಾರದಂದು ಜಿ-7 ರಾಷ್ಟ್ರಗಳೊಂದಿಗೆ ಒಂದು ವರ್ಚ್ಯುಯಲ್ ತುರ್ತು ಸಭೆಯನ್ನು ನಡೆಸಿದರು. ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್ ದೇಶದ ಮುಖಂಡರು ಸಭೆಯಲ್ಲಿ ಭಾಗವಹಿಸಿ ತಾಲಿಬಾನ್ ವಿಧಿಸಿರುವ ಗಡುವನ್ನು ವಿಸ್ತರಿಸುವಂತೆ ಆಗ್ರಹಿಸಬೇಕೆಂದು ಬೈಡನ್ ಮೇಲೆ ಒತ್ತಡ ಹೇರಿದರು.

ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ವೇಗವಾಗಿ ಸಾಗುತ್ತಿದ್ದು ಆಗಸ್ಟ್ 31 ರೊಳಗೆ ಅದು ಪೂರ್ಣಗೊಳ್ಳಲಿದೆ ಅಂತ ಬೈಡನ್ ಈ ರಾಷ್ಟ್ರಗಳಿಗೆ ಹೇಳಿದರೆಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಆದರೆ ವಿಷಯ ಅದಲ್ಲ. ಜಿ-7 ಶೃಂಗ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಬೈಡೆನ್ ಅವರು, ತಾಲಿಬಾನ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಯಾವುದೇ ಉತ್ತರ ನೀಡದೆ ಜಾರಿಕೊಂಡರು. ಪತ್ರಕರ್ತರು ಉತ್ತರಕ್ಕಾಗಿ ಆಗ್ರಹಿಸುತ್ತಿದ್ದರೂ ಅವರಿಗೆ ಬೆನ್ನು ಹಾಕಿ ಮೌನವಾಗಿ ಅಲ್ಲಿಂದ ನಿರ್ಗಮಿಸಿದರು. ನಿಸ್ಸಂದೇಹವಾಗಿ, ತಾಲಿಬಾನ್ ಬಂಡುಕೋರರ ಒಂ ದು ಚಿಕ್ಕ ಗುಂಪು ಅಮೇರಿಕ ಅಧ್ಯಕ್ಷನನ್ನೇ ಮೌನವಾಗಿಸಿದೆ.

ಮಾಡಿದ್ದುಣ್ಣೋ ಮಹರಾಯ.. ಎನ್ನುವಂತಿದೆ ಅಮೇರಿಕದ ಸ್ಥಿತಿ

ಇದನ್ನೂ ಓದಿ: ನಾರಾಯಣ್​ ರಾಣೆ ಬಂಧನದ ಬೆನ್ನಲ್ಲೇ ವೈರಲ್ ಆಯ್ತು ಉದ್ಧವ್​ ಠಾಕ್ರೆ ಹಳೇ ವಿಡಿಯೋ; ಮಹಾ ಸಿಎಂ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿರುವ ನೆಟ್ಟಿಗರು

Follow us on