ಗನ್ ಆಪರೇಟ್ ಮಾಡಲು ಗೊತ್ತಿರದಿದ್ದರೂ ಇವನು ತಾಲಿಬಾನ್ ಸೇನೆಯಲ್ಲಿ ಯೋಧ!

ಗನ್ ಆಪರೇಟ್ ಮಾಡಲು ಗೊತ್ತಿರದಿದ್ದರೂ ಇವನು ತಾಲಿಬಾನ್ ಸೇನೆಯಲ್ಲಿ ಯೋಧ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2021 | 12:54 AM

ಅದು ಅತ್ಯಾಧುನಿಕ ತಂತ್ರಜ್ಞಾನದ ಆಯುಧ. ಉಪಯೋಗಿಸುವ ರೀತಿಯನ್ನು ಅದನ್ನು ಪೂರೈಸಿರುವವರು ತಿಳಿಸಿರುತ್ತಾರೆ. ಆದರೆ ತಾಲಿಬಾನಿ ಕಮಾಂಡರ್ಗಳಿಗೆ ಅದು ಅರ್ಥವಾಗುತ್ತದೋ ಅಥವಾ ಆದವರಂತೆ ತಲೆಯಲ್ಲಾಡಿಸುತ್ತಾರೋ?

ಭಾರತದಲ್ಲಿ ಜಾತಿ-ಆಧಾರಿತ ಜನಗಣತಿ ಮಾಡಬೇಕೆಂದು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅದು ಸರಿ, ಆದರೆ ತಾಲಿಬಾನಿಗಳಲ್ಲಿ ಎಷ್ಟು ಜನ ಶಿಕ್ಷಿತರು ಎಷ್ಟು ಜನ ಅನಕ್ಷರಸ್ಥರು ಅಂತ ಒಂದು ಗಣತಿ ಅತ್ಯಂತ ಜರೂರಾಗಿ ಮಾಡಬೇಕಿದೆ ಅಂತ ಕಾಣುತ್ತೆ ಮಾರಾಯ್ರೇ. ಅವರಲ್ಲಿ ಯೋಧರು ಯಾರು, ಸಾಮಾನ್ಯರು ಯಾರು ಅಂತ ಗುರುತಿಸುವುದು ಸಹ ಕಷ್ಟವಾಗುತ್ತಿದೆ. ಹಾಗೆಯೇ ತಾಲಿಬಾನಿಗಳ ಉಡುಗೆ ಒಂದೇ ತೆರೆನಾಗಿರುವುದರಿಂದ ಅವರಲ್ಲಿ ಓದಿಕೊಂಡವನು ಯಾರು, ನಿರಕ್ಷರಕುಕ್ಷಿ ಯಾರು ಅಂತ ಗುರುತು ಹಿಡಿಯುವುದು ನಮಗೆ ಮಾತ್ರ ಅಲ್ಲ, ಅವರದ್ದೇ ರ‍್ಯಾಂಕಿನ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಈ ವಿಡಿಯೋ ನೋಡಿದರೆ ನಿಮಗೆ ವಿಷಯ ಅರ್ಥವಾಗುತ್ತದೆ.

ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ಇವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದು ಅಮೆರಿಕ. ಈ ದೇಶ ವೈಜ್ಞಾನಿಕವಾಗಿ, ತಂತ್ರಜ್ಞಾನದಲ್ಲಿ ಮತ್ತು ಇತರ ಬಹಳ ಕ್ಷೇತ್ರಗಳಲ್ಲಿ ತುಂಬಾ ಮುಂದುವರಿದಿರುವ ರಾಷ್ಟ್ರ. ಚೀನಾ ಸಹ ತಾಲಿಬಾನಿಗಳಿಗೆ ಆಯುಧಗಳನ್ನು ಪೂರೈಸುತ್ತದೆ. ಈ ಹೈದರಿಗೆ ಚೀನಿ ಭಾಷೆ ಅರ್ಥವಾಗದು ಮತ್ತು ಇಂಗ್ಲಿಷ್ ಗಂಧವೂ ಇರಲಾರದು. ಇಲ್ಲಿರುವ ವಿಡಿಯೋ ನಲ್ಲಿ ತಾಲಿಬಾನಿಗಳ ಒಂದು ಗುಂಪು ಶಸ್ತ್ರಾಭ್ಯಾಸ ಮಾಡುತ್ತಿರುವ ದೃಶ್ಯ ಕಾಣುತ್ತಿದೆ. ಆದರೆ, ಒಬ್ಬ ಮಾತ್ರ ತನ್ನಲ್ಲಿರುವ ಗನ್ ಅನ್ನು ಆಪರೇಟ್ ಮಾಡುವ ವಿಧಾನ ಗೊತ್ತಾಗದೆ ಒದ್ದಾಡುತ್ತಿದ್ದಾನೆ.

ಅದು ಅತ್ಯಾಧುನಿಕ ತಂತ್ರಜ್ಞಾನದ ಆಯುಧ. ಉಪಯೋಗಿಸುವ ರೀತಿಯನ್ನು ಅದನ್ನು ಪೂರೈಸಿರುವವರು ತಿಳಿಸಿರುತ್ತಾರೆ. ಆದರೆ ತಾಲಿಬಾನಿ ಕಮಾಂಡರ್ಗಳಿಗೆ ಅದು ಅರ್ಥವಾಗುತ್ತದೋ ಅಥವಾ ಆದವರಂತೆ ತಲೆಯಲ್ಲಾಡಿಸುತ್ತಾರೋ? ಅವರಿಗೆ ಅರ್ಥವಾಗಿದ್ದರೆ ಅದನ್ನು ಚಲಾಯಿಸಲು ಗೊತ್ತಾಗದೆ ಇಲ್ಲಿ ಒದ್ದಾಡುತ್ತಿದ್ದಾನಲ್ಲ ಅವನಿಗೆ ಅರ್ಥ ಮಾಡಿಸಿರುತ್ತಿದ್ದರು!

ಅವನು ಪರದಾಡುತ್ತಿರುವ ರೀತಿ ನೋಡಿದರೆ, ಗನ್ನಿನ ತಲೆಬುಡ ಅವನಿಗೆ ಅರ್ಥವಾದಂತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಮಂಕುಬೂದಿಯ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ನಟಿಯ ಜತೆ ಮನ ಬಂದಂತೆ ಡ್ಯಾನ್ಸ್​ ಮಾಡಿ ಕಾಲಿಗೆ ನಮಸ್ಕರಿಸಿದ ಆರ್​ಜಿವಿ; ವಿಡಿಯೋ ವೈರಲ್