ವಿಶ್ವದ ಅತ್ಯಂತ ಪ್ರಬಲ ದೇಶದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ಗೆ ಬ್ಲ್ಯೂಟೂಥ್ ಬಡ್ಸ್ ಫೋಬಿಯ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 10, 2021 | 5:32 PM

2020ರಲ್ಲಿ ಕಮಲಾ ಅವರು ಜೋ ಬೈಡೆನ್ ಅವರೊಂದಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದಾಗ ಅವರ ಎಡಗೈಯಲ್ಲಿ ಬಿಳಿಬಣ್ಣದ ವೈರಿನ ಈಯರ್ ಫೋರ್ ಕಾಣುತಿತ್ತು.

ಅಮೆರಿಕದ ಭಾರತೀಯ ಮೂಲದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬ್ಲ್ಯೂಟೂಥ್ ಬಡ್ಸ್ ಅಥವಾ ಪಾಡ್ಸ್ ಉಪಯೋಗಿಸಿರುವ ಫೋಟೊವನ್ನು ನೀವು ಯಾವತ್ತಾದರೂ ಕಂಡಿದ್ದೀರಾ? ಸಾಧ್ಯನೇ ಇಲ್ಲ ಮಾರಾಯ್ರೇ. ಅವರಿಗೆ ಬ್ಲ್ಯೂಟೂಥ್ ಫೋಬಿಯಾ! ಹಿಂದೆ ಕಮಲಾ ಅವರೊಂದಿಗೆ ಕೆಲಸ ಮಾಡುತ್ತಿದ್ದ ಕೊಲೀಗ್ಗಳು ಹೇಳುವ ಪ್ರಕಾರ ಭದ್ರತೆಯ ದೃಷ್ಟಿಯಿಂದ ಅವರು ಅದನ್ನು ಉಪಯೋಗಿಸುವುದಿಲ್ಲವಂತೆ. ಹಾಗಾಗಿ ಈಯರ್ ಫೋನ್ ಬಳಸುವ ಪ್ರಸಂಗ ಎದುರಾದಾಗ ಮಾಮೂಲಿ ಅಂದರೆ ವೈರ್ವುಳ್ಳ ಈಯರ್ ಪೋನ್ ಅವರ ಕಿವಿಗಳಿಂದ ಕೆಳಗೆ ನೇತಾಡುತ್ತಿರುವುದು ಕಾಣಿಸುತ್ತದೆ.

ಆಫ್​ಕೋರ್ಸ್​, ಈಗ ಜಮಾನಾ ಬದಲಾಗಿದೆ. ಶ್ರೀಮಂತರು, ಸೆಲಿಬ್ರಿಟಿಗಳು ಕಣ್ಣಿಗೆ ಕಾಣದಷ್ಟು ಚಿಕ್ಕ ಬ್ಲ್ಯೂಟೂಥ್ ಬಡ್ಸ್ ಉಪಯೋಗಿಸುತ್ತಾರೆ. ಆದರೆ ಕಮಲಾ ಅವರು ಮಾಧ್ಯಮಗಳೊಂದಿಗೆ ಮಾತಾಡುವಾಗ, ಸಂದರ್ಶನ ನೀಡುವಾಗ ವೈರ್​ಯುಕ್ತ ಈಯರ್ ಫೋನ್ ಅವರ ಕುತ್ತಿಗೆಯಲ್ಲಿ ಜೋತಾಡುತ್ತಿರುವುದು ಕಾಣುತ್ತದೆ.

2020ರಲ್ಲಿ ಕಮಲಾ ಅವರು ಜೋ ಬೈಡೆನ್ ಅವರೊಂದಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದಾಗ ಅವರ ಎಡಗೈಯಲ್ಲಿ ಬಿಳಿಬಣ್ಣದ ವೈರಿನ ಈಯರ್ ಫೋರ್ ಕಾಣುತಿತ್ತು.

ಹಾಗಂತ ಅವರು ಹಳೆಯ ಜಮಾನಾದವರು ಅಂತ ಅಂದ್ಕೋಬೇಡಿ. ಬ್ಲ್ಯೂಟೂಥ್ ಬಳಸಿ ಮಾತಾಡುವಾಗ ತಮ್ಮ ಮಾತುಗಳು ಹ್ಯಾಕ್ ಆಗಬಹುದೆಂಬ ಆತಂಕ ಅವರಲ್ಲಿರುವುದರಿಂದಲೇ ಅದನ್ನು ಬಳಸಲು ಇಷ್ಟಪಡುವುದಿಲ್ಲ.

ಭದ್ರತೆ ಮತ್ತು ಟೆಕ್ನಾಲಜಿ ಬಗ್ಗೆ ಕಮಲ ಹ್ಯಾರಿಸ್ ಹೆಚ್ಚು ಜಾಗರೂಕರಾಗಿರುತ್ತಾರೆ ಎಂದು ಅವರ ಮಾಜಿ ಸಹೋದ್ಯೋಗಿಗಳು ಹೇಳುತ್ತಾರೆ.

ಇದನ್ನೂ ಓದಿ:   Video: ಬಿಪಿನ್​ ರಾವತ್ ಚಿಕ್ಕ ಹುಡುಗನಂತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದ ವಿಡಿಯೋ ವೈರಲ್​; ನ್ಯೂ ಇಯರ್​ ಪಾರ್ಟಿಯ ಸಂಭ್ರಮ ಇದಾಗಿತ್ತು