Video: ಬಿಪಿನ್ ರಾವತ್ ಚಿಕ್ಕ ಹುಡುಗನಂತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದ ವಿಡಿಯೋ ವೈರಲ್; ನ್ಯೂ ಇಯರ್ ಪಾರ್ಟಿಯ ಸಂಭ್ರಮ ಇದಾಗಿತ್ತು
ಬಿಪಿನ್ ರಾವತ್ ಮೃತಪಟ್ಟ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಇದರಲ್ಲಿ ರಾವತ್ ಅವರೊಂದಿಗೆ ನೃತ್ಯ ಮಾಡಿದ ಸೇನಾ ಸಿಬ್ಬಂದಿಯ ಕುಟುಂಬದವರೂ ಪಾಲ್ಗೊಂಡಿದ್ದರು.
ಭಾರತದ ಮೊದಲ ಸಿಡಿಎಸ್ (Chief Defence Staff -CDS) ಬಿಪಿನ್ ರಾವತ್ ನಿನ್ನೆ ತಮಿಳುನಾಡಿನ ಕೂನೂರ್ನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಅವರ ಪತ್ನಿ ಮಧುಲಿಕಾ ರಾವತ್ ಮತ್ತಿತರ ಸೇನಾಧಿಕಾರಿಗಳು ಸೇರಿ ಒಟ್ಟು 13 ಮಂದಿ ದುರ್ಮರಣಕ್ಕೀಡಾದ ಬಹುದೊಡ್ಡ ದುರಂತ ಇದು. ಬಿಪಿನ್ ರಾವತ್ ಮತ್ತು ಇತರರ ಸಾವಿಗೆ ಇಡೀ ದೇಶ ದುಃಖ ವ್ಯಕ್ತಪಡಿಸುತ್ತಿದೆ. ಅವರ ಹಳೇ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ತುಂಬ ವೈರಲ್ ಆಗುತ್ತಿವೆ. ಅದರಲ್ಲೂ ಬಿಪಿನ್ ರಾವತ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅದು ಕಳೆದ ಹೊಸವರ್ಷದ ಪಾರ್ಟಿಯದ್ದು ಎಂದು ಹೇಳಲಾಗಿದ್ದು, ಲಖನೌನಲ್ಲಿ ಗೊರ್ಖಾ ರೆಜಿಮೆಂಟ್ನ ಸಹೋದ್ಯೋಗಿಗಳೊಂದಿಗೆ ರಾವತ್ ನೃತ್ಯ ಮಾಡಿದ್ದು.
ಬಿಪಿನ್ ರಾವತ್ ಮೃತಪಟ್ಟ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಇದರಲ್ಲಿ ರಾವತ್ ಅವರೊಂದಿಗೆ ನೃತ್ಯ ಮಾಡಿದ ಸೇನಾ ಸಿಬ್ಬಂದಿಯ ಕುಟುಂಬದವರೂ ಪಾಲ್ಗೊಂಡಿದ್ದರು. ಅವರಂದು ನೇಪಾಳಿ ಸಿನಿಮಾ ಗೋರ್ಖಾ ಪಲ್ಟನ್ದ ಹಾಡಿಗೆ ತುಂಬ ಖುಷಿಯಾಗಿ, ನಗುನಗುತ್ತ ನೃತ್ಯ ಮಾಡಿದ್ದನ್ನು ಈ ವಿಡಿಯೋದಲ್ಲಿ ಕಾಣಬಹುದು. 2010ರಲ್ಲಿ ಬಿಡುಗಡೆಯಾಗಿದ್ದ ಗೋರ್ಖಾ ಪಲ್ಟನ್ ಸಿನಿಮಾದ ಟೈಟಲ್ ಸಾಂಗ್ ಆದ ಇದನ್ನು ಪ್ರಶಾಂತ್ ತಮಂಗ್ ಹಾಡಿದ್ದಾರೆ. ಅಂದಹಾಗೆ ಇದು ಗೋರ್ಖಾ ರೆಜಿಮೆಂಟ್ ಕುರಿತಾದ ಸಿನಿಮಾವೇ ಆಗಿತ್ತು.
ಬಿಪಿನ್ ರಾವತ್ ಅವರು 11 ಗೋರ್ಖಾ ರೈಫಲ್ಸ್ನ 5ನೇ ಬೆಟಾಲಿಯನ್ನವರಾಗಿದ್ದಾರೆ. ಅವರ ತಂದೆಯೂ ಕೂಡ ಲೆಫ್ಟಿನೆಂಟ್ ಜನರಲ್ ಆಗಿದ್ದವರು ಮತ್ತು ಇದೇ ಘಟಕದಲ್ಲಿ ಇದ್ದವರು. ಸೇನೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ 2019ರ ಡಿಸೆಂಬರ್ 31ರಿಂದ ಭಾರತದ ಮೊದಲ ಸಿಡಿಎಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ತಮಿಳುನಾಡಿನ ವೆಲ್ಲಿಂಗ್ಟನ್ಗೆ ಸೇನಾ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ, ಅದು ಕೂನೂರು ಬಳಿ ಪತನಗೊಂಡು ಮರಣ ಹೊಂದಿದ್ದಾರೆ.
Published On - 11:52 am, Thu, 9 December 21