ದೊಡ್ಡಬಳ್ಳಾಪುರ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಬಾಲ ಕಾರ್ಮಿಕರ ಬಳಕೆ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ದೊಡ್ಡಬಳ್ಳಾಪುರ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಂಡು ಸಾರಿಗೆ ಇಲಾಖೆ ಅಧಿಕಾರಿಗಳು ಕೆಲಸ ಮಾಡಿಸುತ್ತಿದ್ದಾರೆ. ಸರ್ಕಾರಿ ಬಸ್ಸುಗಳ ಕಸ ಗುಡಿಸಲು ಬಾಲಕನಿಗೆ ತಿಂಗಳಿಗೆ ಐದು ಸಾವಿರ ನೀಡುತ್ತಿದ್ದಾರೆ. ಕೆಲಸಗಾರರನ್ನ ನೇಮಕ ಮಾಡಿಕೊಂಡರೆ, ಹೆಚ್ಚುವರಿ ಸಂಬಳ ನೀಡಬೇಕಾಗುತ್ತದೆ. ಈ ಉದ್ದೇಶದಿಂದ ಬಾಲಕಾರ್ಮಿಕರಿಗೆ ಐದು ಸಾವಿರ ಕೊಟ್ಟು ಅಧಿಕಾರಿಗಳು ಕೆಲಸ ಮಾಡಿಸುತ್ತಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು ಗ್ರಾಮಾಂತರ ಅ.21: ಬಾಲ ಕಾರ್ಮಿಕನಿಂದ ಕೆಎಸ್ಆರ್ಟಿಸಿ(KSRTC) ಬಸ್ಗಳ ಕ್ಲೀನಿಂಗ್ ಮಾಡಿಸಿದ ಘಟನೆ ಜಿಲ್ಲೆಯ ದೊಡ್ಡಬಳ್ಳಾಪುರ(Doddaballapur) ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಕಂಡುಬಂದಿದೆ. ಹೌದು, ಬಾಲ ಕಾರ್ಮಿಕರನ್ನು ಬಳಸಿಕೊಂಡು ಸಾರಿಗೆ ಇಲಾಖೆ ಅಧಿಕಾರಿಗಳು ಕೆಲಸ ಮಾಡಿಸುತ್ತಿದ್ದಾರೆ. ಸರ್ಕಾರಿ ಬಸ್ಸುಗಳ ಕಸ ಗುಡಿಸಲು ಬಾಲಕನಿಗೆ ತಿಂಗಳಿಗೆ ಐದು ಸಾವಿರ ನೀಡುತ್ತಿದ್ದಾರೆ. ಕೆಲಸಗಾರರನ್ನ ನೇಮಕ ಮಾಡಿಕೊಂಡರೆ, ಹೆಚ್ಚುವರಿ ಸಂಬಳ ನೀಡಬೇಕಾಗುತ್ತದೆ. ಈ ಉದ್ದೇಶದಿಂದ ಬಾಲಕಾರ್ಮಿಕರಿಗೆ ಐದು ಸಾವಿರ ಕೊಟ್ಟು ಅಧಿಕಾರಿಗಳು ಕೆಲಸ ಮಾಡಿಸುತ್ತಿರುವ ಆರೋಪ ಕೇಳಿಬಂದಿದೆ. ಇನ್ನು ಓದುವುದನ್ನ ಬಿಟ್ಟು ಈ ಬಾಲಕ ಸಾರಿಗೆ ಬಸ್ ಗಳ ಸ್ವಚ್ಚತೆಯ ಕೆಲಸ ಮಾಡುತ್ತಿದ್ದಾನೆ. ಆದರೆ, ಕಂಡು ಕಾಣದಂತೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ