ಉತ್ತರ ಪ್ರದೇಶದೆಲ್ಲೆಡೆ ಸಂಭ್ರಮ; ವಯಸ್ಕರು ಮತ್ತು ಸಾಧು-ಸಂತರು ಸಹ ರಸ್ತೆಗಳಲ್ಲಿ ಕುಣಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 10, 2022 | 7:07 PM

ನಂತರ ಒಬ್ಬ ಸಾಧು ಅಲ್ಲಿಗೆ ಬರುತ್ತಾರೆ. ಅವರಂತೂ ಆವೇಷ ಬಂದವರಂತೆ ಕುಣಿಯುತ್ತಾರೆ. ಕಾವಿಧಾರಿಯು ತಲೆಗೆ ಕೇಸರಿ ವಸ್ತ್ರ ಸುತ್ತಿದ್ದಾರೆ, ಹೆಗಲ ಮೇಲೆ ಕೇಸರಿ ಶಲ್ಯ ಹೊದ್ದಿದ್ದಾರೆ, ಬಗಲಲ್ಲಿ ಜೋಳಿಗೆ ಮತ್ತು ಒಂದು ಸ್ಟೀಲ್ ಪಾತ್ರೆ ಇದೆ.

ಉತ್ತರ ಪ್ರದೇಶದಾದ್ಯಂತ (Uttar Pradesh) ಗುರುವಾರ ಇಂಥ ದೃಶ್ಯಗಳು ಕಂಡುಬಂದವು. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ನೇತೃತ್ವದ ಬಿಜೆಪಿಗೆ ರಾಜ್ಯದಲ್ಲಿ ಸ್ಪಷ್ಟ ಬಹುಮತ ಸಿಕ್ಕಿದ್ದು ಸತತವಾಗಿ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಪಕ್ಷದ ಯಶಸ್ಸನ್ನು ಕಾರ್ಯಕರ್ತರು ಕುಣಿಯುತ್ತಾ, ಪರಸ್ಪರರ ಮೇಲೆ ಗುಲಾಲ್ ಎರಚುತ್ತಾ ಆಚರಿಸಿದರು. ಎಲ್ಲೆಡೆ ಮೋದಿ ಜೀ ಕೀ ಜೈ ಮತ್ತು ಯೋಗೀ ಜೀ ಕೀ ಜೈ ಘೋಷಣೆ ಮುಗಿಲು ಮುಟ್ಟಿತ್ತು. ಉತ್ತರ ಪ್ರದೇಶದ ಒಂದು ಭಾಗದಿಂದ ನಮಗೆ ಈ ವಿಡಿಯೋ ಲಭ್ಯವಾಗಿದೆ. ಒಬ್ಬ ವಯಸ್ಕ ವ್ಯಕ್ತಿ ಮತ್ತು ಸಾಧು ತಮ್ಮ ಸಂತಸವನ್ನು ಕುಣಿಯುತ್ತಾ ವ್ಯಕ್ತಪಡಿಸುತ್ತಿದ್ದಾರೆ.

ಸ್ಟ್ರೈಪ್ಡ್ ಅಂಗಿ ಧರಿಸಿರುವ ಯಜಮಾನರು ಡೊಳ್ಳಿನ ತಾಳಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುತ್ತಾರೆ. ನೀವು ಗಮನಿಸಿ, ಡೊಳ್ಳು ಬಾರಿಸುವವ ತಾಳ ಬದಲಾಯಿಸಿದ ತಕ್ಷಣ ಅವರ ಕುಣಿತದ ಶೈಲಿಯೂ ಬದಲಾಗುತ್ತದೆ. ಸಾಮಾನ್ಯವಾಗಿ ಹಿಮಾಚಲ ಪ್ರದೇಶದ ಜನರು ಧರಿಸುವ ಟೋಪಿಯನ್ನು ತಲೆಗೆ ಹಾಕಿಕೊಂಡಿರುವ ವಯಸ್ಕರು ನಿರ್ಭಿಡೆಯಿಂದ ಕುಣಿಯುತ್ತಾ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ನಂತರ ಒಬ್ಬ ಸಾಧು ಅಲ್ಲಿಗೆ ಬರುತ್ತಾರೆ. ಅವರಂತೂ ಆವೇಷ ಬಂದವರಂತೆ ಕುಣಿಯುತ್ತಾರೆ. ಕಾವಿಧಾರಿಯು ತಲೆಗೆ ಕೇಸರಿ ವಸ್ತ್ರ ಸುತ್ತಿದ್ದಾರೆ, ಹೆಗಲ ಮೇಲೆ ಕೇಸರಿ ಶಲ್ಯ ಹೊದ್ದಿದ್ದಾರೆ, ಬಗಲಲ್ಲಿ ಜೋಳಿಗೆ ಮತ್ತು ಒಂದು ಸ್ಟೀಲ್ ಪಾತ್ರೆ ಇದೆ. ಮೊದಲು ಇವೆಲ್ಲವನ್ನು ಹೊತ್ತೇ ಅವರು ಕುಣಿಯುತ್ತಾರೆ. ಸ್ವಲ್ಪ ಸಮಯದ ಬಳಿಕ ಇವುಗಳನ್ನು ಪಕ್ಕಕ್ಕಿಟ್ಟು ಕುಣಿಯುತ್ತಾರೆ.

ಇಲ್ಲಿ ನೆರೆದಿರುವ ಜನರ ತಲೆಗಳ ಮೇಲೆ ಕೇಸರಿ ಪೇಟ ಇಲ್ಲವೇ ಹೆಗಲ ಮೇಲೆ ಕೇಸರಿ ಶಲ್ಯವನ್ನು ನೋಡಬಹುದು. ನಿಸ್ಸಂದೇಹವಾಗಿ ಉತ್ತರ ಪ್ರದೇಶದ ಹೆಚ್ಚಿನ ಭಾಗ ಸಂಭ್ರಮದಲ್ಲಿ ಮುಳುಗಿದೆ.

ಇದನ್ನೂ ಓದಿ:  Uttar Pradesh: ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಇವಿಎಂ ವಿವಾದ: ಯೋಗಿ, ಅಖಿಲೇಶ್ ನಡುವೆ ವಾಗ್ವಾದ