Uttar Pradesh: ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಇವಿಎಂ ವಿವಾದ: ಯೋಗಿ, ಅಖಿಲೇಶ್ ನಡುವೆ ವಾಗ್ವಾದ

Uttar Pradesh Election Result 2022: ವಾರಾಣಸಿ ಕ್ಷೇತ್ರದ ಓರ್ವ ನೋಡೆಲ್ ಅಧಿಕಾರಿ, ಸೌಭದ್ರ ಜಿಲ್ಲೆಯ ಓರ್ವ ರಿಟರ್ನಿಂಗ್ ಆಫೀಸರ್ ಮತ್ತು ಬರೇಲಿ ಜಿಲ್ಲೆಯ ಓರ್ವ ಹೆಚ್ಚುವರಿ ಚುನಾವಣಾ ಅಧಿಕಾರಿಯನ್ನು ಮತಎಣಿಕೆಗೆ ಒಂದು ದಿನ ಮೊದಲು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ

Uttar Pradesh: ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಇವಿಎಂ ವಿವಾದ: ಯೋಗಿ, ಅಖಿಲೇಶ್ ನಡುವೆ ವಾಗ್ವಾದ
ಸಮಾಜವಾದಿ ಪಕ್ಷ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಪೈಪೋಟಿ ಇದೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 10, 2022 | 8:12 AM

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆದಿದೆ. ಬಹುತೇಕ ಮತಗಟ್ಟೆ ಸಮೀಪಕ್ಷೆಗಳು ಬಿಜೆಪಿಗೆ ಮುನ್ನಡೆ ಸಿಗಲಿದೆ ಎಂದು ಹೇಳಿದ್ದರೂ ಸಮಾಜವಾದಿ ಪಕ್ಷವೂ ಸಾಕಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದಿವೆ. ವಿದ್ಯುನ್ಮಾನ ಮತಯಂತ್ರಗಳ (Electronic Voting Machine – EVM) ಬಗ್ಗೆಯೇ ಎರಡೂ ಪಕ್ಷಗಳು ವಾಗ್ವಾದಕ್ಕೆ ಇಳಿದಿವೆ. ಇವಿಎಂಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಸ್ಥಳಾಂತರಿಸಿದ ಆರೋಪದ ಮೇಲೆ ಮೂವರು ಅಧಿಕಾರಿಗಳನ್ನು ಬುಧವಾರ ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಯಿತು. ವಾರಾಣಸಿ ಕ್ಷೇತ್ರದ ಓರ್ವ ನೋಡೆಲ್ ಅಧಿಕಾರಿ, ಸೌಭದ್ರ ಜಿಲ್ಲೆಯ ಓರ್ವ ರಿಟರ್ನಿಂಗ್ ಆಫೀಸರ್ ಮತ್ತು ಬರೇಲಿ ಜಿಲ್ಲೆಯ ಓರ್ವ ಹೆಚ್ಚುವರಿ ಚುನಾವಣಾ ಅಧಿಕಾರಿಯನ್ನು ಮತಎಣಿಕೆಗೆ ಒಂದು ದಿನ ಮೊದಲು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಚುನಾವಣಾ ಕಾರ್ಯದಲ್ಲಿ ಸಮಾಜಘಾತುಕ ಶಕ್ತಿಗಳನ್ನು ತೊಡಗಿಸಲು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಪ್ರಯತ್ನಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.

ಮೈತ್ರಿಕೂಟಗಳು

ಉತ್ತರ ಪ್ರದೇಶ ರಾಜಕಾರಣದಲಲ್ಲಿ ಬಿಜೆಪಿ, ಎಸ್​ಪಿ, ಕಾಂಗ್ರೆಸ್ ಮತ್ತು ಬಿಎಸ್​ಪಿ ಮುಖ್ಯ ಭೂಮಿಕೆಯಲ್ಲಿವೆ. ಅನುಪ್ರಿಯಾ ಪಟೇಲರ ಅಪತ್ನಾ ದಳ್ (ಎಸ್) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 18 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಸಂಜಯ್ ನಿಶಾದ್​ರ ನಿಶಾದ್​ ಪಕ್ಷವೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ರಾಷ್ಟ್ರೀಯ ಲೋಕದಳ (ಆರ್​ಎಲ್​ಡಿ) ಮತ್ತು ಸುಹೇಲ್​ದೇವ್ ಭಾರತೀಯ ಸಮಾಜವಾದಿ ಪಕ್ಷಗಳೊಂದಿಗೆ (ಎಸ್​ಬಿಎಸ್​ಪಿ) ಮೈತ್ರಿ ಮಾಡಿಕೊಂಡಿದ್ದಾರೆ.

2017ರಲ್ಲಿ ಏನಾಗಿತ್ತು?

403 ಸದಸ್ಯ ಬಲದ ಉತ್ತರ ಪ್ರದೇಶದಲ್ಲಿ 2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 325 ಸ್ಥಾನಗಳನ್ನು ಗೆದ್ದಿತ್ತು. ಆಗ ಅಪ್ನಾದಳ್ ಮತ್ತು ಎಸ್​ಬಿಎಸ್​ಪಿ ಪಕ್ಷಗಳು ಬಿಜೆಪಿಯ ಮೈತ್ರಿಯಲ್ಲಿದ್ದವು. ಬಿಜೆಪಿ ಏಕಾಂಗಿಯಾಗಿ 312 ಸ್ಥಾನಗಳಲ್ಲಿ ಜಯಗಳಿಸಿತ್ತು. ಅಪ್ನಾದಳ್ 9, ಎಸ್​ಬಿಎಸ್​ಪಿ 4 ಸ್ಥಾನಗಳಲ್ಲಿ ಜಯಗಳಿಸಿದ್ದವು. ಸಮಾಜವಾದಿ ಪಕ್ಷ 47 ಮತ್ತು ಅದರೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಎಸ್​ಪಿ ಕೇವಲ 19 ಸ್ಥಾನ ಪಡೆದಿದ್ದರೆ, ಆರ್​ಎಲ್​ಡಿ ಒಂದೇ ಒಂದು ಸ್ಥಾನದಲ್ಲಿ ಜಯಗಳಿಸಿತ್ತು.

ಎಕ್ಸಿಟ್ ಪೋಲ್​ ಭವಿಷ್ಯವೇನು?

ಚುನಾವಣೋತ್ತರ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸ್ಪಷ್ಟ ಗೆಲುವು ಮತ್ತು ಸಮಾಜವಾದಿ ಪಕ್ಷಕ್ಕೆ ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಲಾಭ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ. 403 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಟ್ಟು 4,441 ಅಭ್ಯರ್ಥಿಗಳ ಭವಿಷ್ಯವನ್ನು ಇಂದಿನ ಫಲಿತಾಂಶ ನಿರ್ಧರಿಸುತ್ತದೆ.

ಇದನ್ನೂ ಓದಿ: Uttar Pradesh: ಉತ್ತರ ಪ್ರದೇಶದಲ್ಲಿ ಇವಿಎಂ ಪ್ರೋಟೋಕಾಲ್​ನಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡ ವಿಡಿಯೋ ವೈರಲ್; ಶೀಘ್ರ ತನಿಖೆಗೆ ಎಸ್​ಪಿ ಒತ್ತಾಯ

ಇದನ್ನೂ ಓದಿ: 5 State Election Results 2022 Live: ಗದ್ದುಗೆ ಯಾರಿಗೆ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಕ್ಷಣಕ್ಷಣದ ಮಾಹಿತಿ

ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ