ರಾಜ್​ಕುಮಾರ್ ಹುಟ್ಟೂರು ಗಾಜನೂರಿನಲ್ಲಿ ರಾಘಣ್ಣ ಸಂಚಾರ

ರಾಜ್​ಕುಮಾರ್ ಹುಟ್ಟೂರು ಗಾಜನೂರಿನಲ್ಲಿ ರಾಘಣ್ಣ ಸಂಚಾರ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 10, 2022 | 9:47 PM

‘ಕನ್ನಡಕ್ಕೆ ಮೊದಲ ಗೌರವ..’ ಎಂಬ ಹಾಡಿನ ಚಿತ್ರೀಕರಣ ಕೂಡ ಇದೇ ಊರಿನಲ್ಲಿ ನಡೆಯಲಿದೆ. ರಾಘವೇಂದ್ರ ರಾಜ್​ಕುಮಾರ್​ ಅವರು ಗಾಜನೂರಿನಲ್ಲಿ ಸುತ್ತಾಟ ನಡೆಸಿದ್ದಾರೆ.

ರಾಘವೇಂದ್ರ ರಾಜ್​ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ‘ಖಡಕ್​ ಹಳ್ಳಿ ಹುಡುಗರು’ ಚಿತ್ರದ (Khadak Halli Hudugaru) ಮುಹೂರ್ತ ಇಂದು (ಮಾರ್ಚ್​ 10) ನೆರೆವೇರಿದೆ. ಡಾ. ರಾಜ್​ಕುಮಾರ್ ಅವರ (Dr Rajkumar) ಹುಟ್ಟೂರಾದ ಚಾಮರಾಜನಗರದ ಗಾಜನೂರಿನಲ್ಲಿ ಇದರ ಮುಹೂರ್ತ ನೆರವೇರಿರುವುದು ವಿಶೇಷ. ರಾಘವೇಂದ್ರ ರಾಜ್​ಕುಮಾರ್ ಅವರ ಸೋದರತ್ತೆ ನಾಗಮ್ಮ ಪೂಜೆ ಮಾಡಿ, ಸಿನಿಮಾಗೆ ಚಾಲನೆ ನೀಡಿದರು. ಈ ಚಿತ್ರದಲ್ಲಿ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಹೀರೋ ಅಲ್ಲ. ಆದರೆ, ಅವರ ಪಾತ್ರ ತುಂಬಾನೇ ಪ್ರಾಮುಖ್ಯತೆ ವಹಿಸಲಿದೆ. ರಾಜ್​ಕುಮಾರ್ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯಲಿದೆ. ‘ಕನ್ನಡಕ್ಕೆ ಮೊದಲ ಗೌರವ..’ ಎಂಬ ಹಾಡಿನ ಚಿತ್ರೀಕರಣ ಕೂಡ ಇದೇ ಊರಿನಲ್ಲಿ ನಡೆಯಲಿದೆ. ರಾಘವೇಂದ್ರ ರಾಜ್​ಕುಮಾರ್​ ಅವರು ಗಾಜನೂರಿನಲ್ಲಿ ಸುತ್ತಾಟ ನಡೆಸಿದ್ದಾರೆ.

ಇದನ್ನೂ ಓದಿ: James: ‘ಜೇಮ್ಸ್​​ನಲ್ಲಿ ಅಪ್ಪುನ ಕಣ್ತುಂಬ ನೋಡಬೇಕು’; ಮನದಿಂಗಿತ ಹೇಳಿಕೊಂಡ ವಿಜಯ್ ರಾಘವೇಂದ್ರ

ನಾಗತ್ತೆ ಮನೆಯಲ್ಲಿ ಭಾವುಕರಾದ ರಾಘವೇಂದ್ರ ರಾಜ್​ಕುಮಾರ್​-ಮಂಗಳಾ ದಂಪತಿ; ಇಲ್ಲಿದೆ ವಿಡಿಯೋ