ರಾಹುಲ್ಗಾಂಧಿ ಹೊಲಿಗೆ ಹಾಕಿದ್ದ ಚಪ್ಪಲಿಗಳಿಗೆ ಲಕ್ಷ ಲಕ್ಷ ಹಣ ಕೊಟ್ಟು ಖರೀದಿಸಲು ಮುಗಿಬಿದ್ದ ಜನ
ಸಂಸದ ರಾಹುಲ್ ಗಾಂಧಿ ಸುಲ್ತಾನ್ಪುರಕ್ಕೆ ಹೋಗಿದ್ದಾಗ ಚಮ್ಮಾರನ ಅಂಗಡಿಯಲ್ಲಿ ಹೊಲಿಗೆ ಹಾಕಿದ್ದ ಚಪ್ಪಲಿಗಳಿಗೆ ಭಾರಿ ಬೇಡಿಕೆ ಬಂದಿದೆ. ಆ ಚಪ್ಪಲಿಗಳನ್ನು ಲಕ್ಷ ಲಕ್ಷ ಹಣವನ್ನು ಕೊಟ್ಟು ಖರೀದಿ ಮಾಡಲು ಜನರು ಸಿದ್ಧರಿದ್ದಾರೆ. ರಾಹುಲ್ ಗಾಂಧಿ ಜುಲೈ 26ರಂದು ಮಾನನಷ್ಟ ಮೊಕದ್ದಮೆ ಪ್ರಕರಣವೊಂದರಲ್ಲಿ ಸುಲ್ತಾನ್ಪುರ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಸಂಸದ ರಾಹುಲ್ ಗಾಂಧಿ(Rahul Gandhi) ಸುಲ್ತಾನ್ಪುರಕ್ಕೆ ಹೋಗಿದ್ದಾಗ ಚಮ್ಮಾರನ ಅಂಗಡಿಯಲ್ಲಿ ಹೊಲಿಗೆ ಹಾಕಿದ್ದ ಚಪ್ಪಲಿಗಳಿಗೆ ಭಾರಿ ಬೇಡಿಕೆ ಬಂದಿದೆ. ಆ ಚಪ್ಪಲಿಗಳನ್ನು ಲಕ್ಷ ಲಕ್ಷ ಹಣವನ್ನು ಕೊಟ್ಟು ಖರೀದಿ ಮಾಡಲು ಜನರು ಸಿದ್ಧರಿದ್ದಾರೆ. ರಾಹುಲ್ ಗಾಂಧಿ ಜುಲೈ 26ರಂದು ಮಾನನಷ್ಟ ಮೊಕದ್ದಮೆ ಪ್ರಕರಣವೊಂದರಲ್ಲಿ ಸುಲ್ತಾನ್ಪುರ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಆ ಸಂದರ್ಭದಲ್ಲಿ ಚಮ್ಮಾರನ ಅಂಗಡಿಯೊಂದರ ಬಳಿ ನಿಲ್ಲಿಸಿ ಅವರೊಂದಿಗೆ ಮಾತನಾಡಿದ್ದರು, ಬಳಿಕ ಚಪ್ಪಲಿಯನ್ನು ಹೊಲಿದಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ರಾಹುಲ್ ಗಾಂಧಿ ಬಂದ ಬಳಿಕ ಚಮ್ಮಾರ ರಾಮ್ಚೇತ್ ಅದೃಷ್ಟವೇ ಬದಲಾಯಿತು. ರಾಹುಲ್ ಗಾಂಧಿ ಹೊಲಿದಿದ್ದ ಚಪ್ಪಲಿಗಳನ್ನು ಖರೀದಿಸಲು ಜನರು ಸರತಿಯಲ್ಲಿ ನಿಂತಿದ್ದಾರೆ.
ಕೇಳಿದಷ್ಟು ಹಣವನ್ನು ನೀಡಲು ಜನರು ಸಿದ್ಧರಿದ್ದಾರೆ. 10 ಲಕ್ಷ ಬೇಕಾದರೂ ಕೊಡ್ತೀವಿ ಚಪ್ಪಲಿ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಚಮ್ಮಾರ ಹೇಳಿದ್ದಾರೆ.
ಮೊದಲು ಒಬ್ಬ ವ್ಯಕ್ತಿ ಒಬ್ಬ ವ್ಯಕ್ತಿ 1 ಲಕ್ಷದ ಆಫರ್‌ನೊಂದಿಗೆ ಬಂದಿದ್ದ, ಈ ಚಪ್ಪಲಿಯನ್ನು ಮಾರಾಟ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಹೊಲಿದ ಚಪ್ಪಲಿ ಅವರಿಗೆ ವಿಶೇಷವಾಗಿದೆ ಎಂದರು. ಯಾರಾದರೂ ಕೋಟಿ ರೂಪಾಯಿ ಕೊಟ್ಟರೂ ಈ ಚಪ್ಪಲಿ ಮಾರುವುದಿಲ್ಲ.ಆ ಚಪ್ಪಲಿಯನ್ನು ಅಂಗಡಿಯಲ್ಲೇ ಇಡುವುದಾಗಿ ಹೇಳಿದ್ದಾರೆ.
ಚಮ್ಮಾರ ರಾಮ್ಚೇತ್ಗೆ ರಾಹುಲ್ ಗಾಂಧಿ ಉಡುಗೊರೆಯನ್ನೂ ಕಳುಹಿಸಿದ್ದಾರೆ. ಚೆತ್ರಾಂಗೆ ಸಹಾಯ ಮಾಡಲು ಶೂ ಮತ್ತು ಚಪ್ಪಲಿ ಹೊಲಿಯಲು ಎಲೆಕ್ಟ್ರಾನಿಕ್ ಯಂತ್ರವನ್ನು ಕಳುಹಿಸಿದ್ದರು. ಇದನ್ನು ಸ್ವತಃ ಚಮ್ಮಾರ ಚೆತ್ರಂ ಅವರೇ ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ