PM Modi Uttara Kannada Rally Live: ಶಿರಸಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ

| Updated By: ರಮೇಶ್ ಬಿ. ಜವಳಗೇರಾ

Updated on: Apr 28, 2024 | 1:35 PM

PM Modi in Uttara Kannada : ಕರ್ನಾಟಕದ ದಕ್ಷಿಣದಲ್ಲಿ ಮತಸಮರ ಅಂತ್ಯವಾಯ್ತು.. ಇದೀಗ, ಉತ್ತರದಲ್ಲಿ ನಾಯಕರು ಸವಾರಿ ಮಾಡುತ್ತಿದ್ದಾರೆ. ಮತದಾರನ ಸೆಳೆಯುವುದಕ್ಕೆ ಬ್ರಹ್ಮಾಸ್ತ್ರಗಳನ್ನೇ ಪ್ರಯೋಗಿಸುತ್ತಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಉತ್ತರ ಕರ್ನಾಟಕವನ್ನ ಮತ್ತೊಮ್ಮೆ ಕಬಳಿಸುವುದಕ್ಕೆ ಬಿಜೆಪಿ ಪ್ಲ್ಯಾನ್ ಮಾಡಿದೆ. 2ನೇ ಹಂತದ ಮತಬೇಟೆಗೆ ಮೋದಿ ಈಗಾಗಲೇ ಕರ್ನಾಟಕಕ್ಕೆ ಎಂಟ್ರಿಕೊಟ್ಟಿದ್ದು, ಬೆಳಗಾವಿಯಿಂದಲೇ ಮತಬೇಟೆ ಆರಂಭಿಸಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ.

ಕಾರವಾರ, (ಏಪ್ರಿಲ್ 28): ಕರ್ನಾಟಕದ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ (Loksabha Elections 2024) ಎರಡನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ. ಈ ಹಿನ್ನೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಭಾನುವಾರ (ಏಪ್ರಿಲ್‌ 28) ಹಾಗೂ ಸೋಮವಾರ (ಏಪ್ರಿಲ್‌ 29) ರಾಜ್ಯದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲಿಗೆ ಇಂದು(ಏಪ್ರಿಲ್ 28) ಬೆಳಗಾವಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗಿವಹಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಬೆಳಗಾವಿಯಿಂದ ನೇರವಾಗಿ ಶಿರಸಿಗೆ ಆಗಮಿಸಿದ್ದು, ಸಮಾವೇಶದ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ.

Published On - 1:33 pm, Sun, 28 April 24

Follow us on