ಸಿದ್ದರಾಮಯ್ಯ, ಸೋಮಣ್ಣ ಮುಖಾಮುಖಿ: ಮುಡಾ ಬಗ್ಗೆ ನಡೀತು ಸ್ವಾರಸ್ಯಕರ ಚರ್ಚೆ! ವಿಡಿಯೋ ಇಲ್ಲಿದೆ

| Updated By: Ganapathi Sharma

Updated on: Nov 18, 2024 | 12:53 PM

ಕೇಂದ್ರ ಸಚಿವ ವಿ ಸೋಮಣ್ಣ ಹಾಗೂ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ರಮಣಶ್ರೀ ಹೋಟೆಲ್​ನಲ್ಲಿ ಭೇಟಿಯಾದ ಸಂದರ್ಭ ಮುಡಾ ಹಗರಣ ವಿಚಾರ ಪ್ರಸ್ತಾಪವಾಯಿತು. ಉಭಯ ನಾಯಕರ ಮಧ್ಯೆ ನಡೆದ ಸ್ವಾರಸ್ಯಕರ ಸಂಭಾಷಣೆಯ ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ನವೆಂಬರ್ 18: ಬೆಂಗಳೂರಿನ ರಮಣಶ್ರೀ ಹೋಟೆಲ್ ಆವರಣದಲ್ಲಿ ಸೋಮವಾರ ಕೇಂದ್ರ ಸಚಿವ ವಿ ಸೋಮಣ್ಣ ಹಾಗೂ ಸಿಎಂ ಸಿದ್ದರಾಮಯ್ಯ ಮುಖಾಮುಖಿಯಾದರು. ಈ ಸಂದರ್ಭ ಉಭಯ ನಾಯಕರು ನಗುನಗುತ್ತಲೇ ಮುಡಾ ಹಗರಣದ ಬಗ್ಗೆ ಚರ್ಚೆ ಮಾಡಿಕೊಂಡಿದ್ದು ಗಮನ ಸೆಳೆಯಿತು. ಮೊದಲಿಗೆ ಇಬ್ಬರೂ ನಾಯಕರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ಈ ವೇಳೆ, ಮುಡಾ ಸೈಟ್ ವಿಚಾರ ಪ್ರಸ್ತಾಪಿಸಿದ ಕೇಂದ್ರ ಸಚಿವ ಸೋಮಣ್ಣ, ಸಿದ್ದರಾಮಣ್ಣ ವಿಚಾರದಲ್ಲಿ ನಂದು ಏನಿದ್ದರೂ ನೇರ ಮಾತು. ಬೇರೆಯವರ ಹಾಗೆ ಹೆದರಿಸುವುದು, ಹಿಂದೊಂದು ಮುಂದೊಂದು ಮಾಡುವುದು ನನಗೆ ಗೊತ್ತಿಲ್ಲ. ಅಂದೇ ಹೇಳಿದ್ದೆ. ನನ್ನ ಮಾತು ಕೇಳಿದ್ದರೆ ಇಷ್ಟೆಲ್ಲ ಆಗುತ್ತಿತ್ತಾ? ಸಣ್ಣ ವಿಚಾರಕ್ಕೆ ಇಷ್ಟೆಲ್ಲಾ ಆಗುತ್ತಿದೆ, ಅಂದೇ ನನ್ನ ಮಾತು ಕೇಳಬೇಕಿತ್ತು. ಅಂದೇ ಸೈಟ್​​​​ ಹಿಂದಿರುಗಿಸಿದ್ರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ನಾನು ಅವತ್ತೇ ಹೇಳಿದ್ದೆ ಎಂದರು.

ಸೋಮಣ್ಣ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಹಾಗಲ್ಲ, ಸುಳ್ಳು ಹೇಳ್ತಾವ್ರೆ ಕಣಯ್ಯಾ. ನನ್ನ ಮಾತು ಕೇಳು. ಭೂಸ್ವಾಧೀನ ಕಾಯ್ದೆ ಬಗ್ಗೆ ಹೇಳು. ಗೊತ್ತಿಲ್ಲದೇ ಏನೇನೋ ಮಾತನಾಡಬೇಡ ಎಂದರು.

ಉಭಯ ನಾಯಕರ ಮಧ್ಯೆ ನಡೆದ ಸ್ವಾರಸ್ಯಕರ ಸಂಭಾಷಣೆಯ ವಿಡಿಯೋ ಇಲ್ಲಿದೆ ನೋಡಿ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ