Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಸಿಕಾ ಅಭಿಯಾನಕ್ಕೆ ಭಾರತ ಏಷ್ಯಾದ ಎರಡು ಬ್ಯಾಂಕ್​ಗಳಲ್ಲಿ ರೂ, 15,000 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿದೆ

ಲಸಿಕಾ ಅಭಿಯಾನಕ್ಕೆ ಭಾರತ ಏಷ್ಯಾದ ಎರಡು ಬ್ಯಾಂಕ್​ಗಳಲ್ಲಿ ರೂ, 15,000 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 29, 2021 | 9:14 PM

ಏಷ್ಯಾದ ಅತಿ ದೊಡ್ಡ ಬ್ಯಾಂಕ್​ಗಳಲ್ಲಿ ಸುಮಾರು ರೂ. 15,000 ಕೋಟಿಗಳ ಸಾಲಕ್ಕೆ ಭಾರತ ಸರ್ಕಾರ ಅರ್ಜಿ ಸಲ್ಲಿಸಿದೆ. ಸಾಲ ಪಡೆದ ಹಣವನ್ನು ದೇಶದ 19 ರಾಜ್ಯಗಳಲ್ಲಿನ ಸುಮಾರು 32 ಕೋಟಿ ಜನರಿಗೆ ಲಸಿಕೆ ನೀಡಲು ಉಪಯೋಗಿಸಲಾಗುವುದು ಎಂದು ಹೇಳಲಾಗುತ್ತಿದೆ.

ಮೊನ್ನೆಯಷ್ಟೇ 100 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಿರುವ ದಾಖಲೆಯನ್ನು ಭಾರತ ತನ್ನ ಹೆಸರಿಗೆ ಬರೆದುಕೊಂಡಿದೆ. ಆದರೆ ಎಲ್ಲ ಭಾರತೀಯರಿಗೆ ಸಂಪೂರ್ಣವಾಗಿ ಲಸಿಕೆ ಹಾಕಿಸುವ ಅಭಿಯಾನ ಇನ್ನೂ ಕಾಲು ಭಾಗವೂ ಪೂರ್ಣಗೊಂಡಿಲ್ಲ. ಲಸಿಕೆ ಅಭಿಯಾನ ನಿಸ್ಸಂದೇಹವಾಗಿ ಬೃಹತ್ ಪ್ರಮಾಣದ್ದು ಮತ್ತು ಅದಕ್ಕೆ ತಗುಲಲಿರುವ ವೆಚ್ಚವೂ ಅಷ್ಟಿಷ್ಟಲ್ಲ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಏಷ್ಯಾದ ಅತಿ ದೊಡ್ಡ ಬ್ಯಾಂಕ್​ಗಳಲ್ಲಿ ಸುಮಾರು ರೂ. 15,000 ಕೋಟಿಗಳ ಸಾಲಕ್ಕೆ ಭಾರತ ಸರ್ಕಾರ ಅರ್ಜಿ ಸಲ್ಲಿಸಿದೆ. ಸಾಲ ಪಡೆದ ಹಣವನ್ನು ದೇಶದ 19 ರಾಜ್ಯಗಳಲ್ಲಿನ ಸುಮಾರು 32 ಕೋಟಿ ಜನರಿಗೆ ಲಸಿಕೆ ನೀಡಲು ಉಪಯೋಗಿಸಲಾಗುವುದು ಎಂದು ಹೇಳಲಾಗುತ್ತಿದೆ.

ಫಿಲಿಪ್ಪೈನ್ಸ್ ರಾಜಧಾನಿ ಮನಿಲಾನಲ್ಲಿ ನೆಲೆಗೊಂಡಿರುವ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನಲ್ಲಿ ಭಾರತ ರೂ. 11,200 ಕೋಟಿಗಳಿಗೆ ಅರ್ಜಿ ಸಲ್ಲಿಸಿದೆ ಮತ್ತು ಚೀನಾದ ಬೀಜಿಂಗ್ನಲ್ಲಿರುವ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಭಾರತ ಸರ್ಕಾರಕ್ಕೆ ಸುಮಾರು 3,740 ಕೋಟಿ ಸಾಲ ನೀಡಲಿದೆ ಎಂದು ಈ ಬ್ಯಾಂಕಿನ ಹೂಡಿಕೆ ವ್ಯವಹಾರಗಳ ಉಪಾಧ್ಯಕ್ಷ ಡಿಜೆ ಪಾಂಡ್ಯನ್ ಹೇಳಿದ್ದಾರೆ.

ಈ ಹಣದ ಪೈಕಿ ಸುಮಾರು ರೂ. 434 ಕೋಟಿಗಳನ್ನು ಭಾರತ ಸರ್ಕಾರ ಲಸಿಕಾ ಅಭಿಯಾನದಲ್ಲಿ ತೊಡಗಿಸಲಿದೆ.

ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನ ಏಷ್ಯಾ ಪೆಸಿಫಿಕ್ ವ್ಯಾಕ್ಸಿನ್ ಫೆಸಿಲಿಟಿ ಯೋಜನೆ ಅಡಿ ಭಾರತ ಸಾಲಕ್ಕೆ ಅರ್ಜಿ ಸಲ್ಲಿಸಿದೆ ಎಂದು ಹೇಳಲಾಗಿದೆ. ಈ ಬ್ಯಾಂಕಿನ ಸದಸ್ಯರಾಗಿರುವ ಅಭೀವೃದ್ಧಿಶೀಲ ರಾಷ್ಟ್ರಗಳು ಕೊರೊನಾ ವೈರಸ್ ವಿರುದ್ಧ ಲಸಿಕೆ ಕೊಳ್ಳಲು ಮತ್ತು ತಮ್ಮ ದೇಶಗಳ ಜನರಿಗೆ ನೀಡಲು ನೆರವಾಗುವ ಹಾಗೆ ಸದರಿ ಯೋಜನೆಯನ್ನು ರೂಪಿಸಲಾಗಿದೆ.

ಇದನ್ನೂ ಓದಿ:   ಜೋಗದ ಜುಳುಜುಳು ನಾದ: ಸಾವಿರಾರು ಕಂಠಗಳಿಂದ ಜೋಗದ ಝರಿಯಲಿ ಜೋಗದ ಸಿರಿ ಹಾಡಿನ ಕನ್ನಡ ಉತ್ಸವ, ವಿಡಿಯೋ ಇದೆ