AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರಿನ ದೇವರಮನೆಯಲ್ಲಿರುವ ಭೈರವೇಶ್ವರ ದೇವಸ್ಥಾನ ಪ್ರದೇಶ ಪರಶಿವ ಕಾಲಿಡುವ ಮೊದಲು ಬೆಂಗಾಡಾಗಿತ್ತು!

ಚಿಕ್ಕಮಗಳೂರಿನ ದೇವರಮನೆಯಲ್ಲಿರುವ ಭೈರವೇಶ್ವರ ದೇವಸ್ಥಾನ ಪ್ರದೇಶ ಪರಶಿವ ಕಾಲಿಡುವ ಮೊದಲು ಬೆಂಗಾಡಾಗಿತ್ತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 29, 2021 | 5:24 PM

ಈ ಪ್ರದೇಶದ ಪೌರಾಣಿಕ ಹಿನ್ನೆಲೆಯನ್ನು ನಾವು ಗಮನಿಸಿದ್ದೇಯಾದರೆ, ಇದು ಮೊದಲಿಗೆ ದಟ್ಟಕಾಡಾಗಿತ್ತು. ಪರಶಿವನು ಇಲ್ಲಿ ಕಾಲಿಟ್ಟ ನಂತರ ಬೆಂಗಾಡು ಹೀಗೆ ಪರಿವರ್ತನೆಗೊಂಡು ದೇವರಮನೆ ಅನಿಸಿಕೊಂಡಿತು.

ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ದೇವರಮನೆಯಲ್ಲರುವ ಕಾಲ ಭೈರವೇಶ್ವರ ದೇವಸ್ಥಾವನ್ನು ತಲುಪಬೇಕಾದರೆ, ನೀವು ಮೊದಲು ಈ ಪ್ರಕೃತಿದತ್ತ ರಮಣೀಯ ಗುಡ್ಡಗಾಡು ಪ್ರದೇಶವನ್ನು ಪ್ರವೇಶಿಸಬೇಕು. ಬೆಟ್ಟದ ಮೇಲಿನ ಹಚ್ಚ ಹಸುರಿನಿಂದಾವೃತ, ಮನಸ್ಸಿಗೆ ಮುದನೀಡುವ ಮತ್ತು ಕಣ್ಣಿಗೆ ಮನೋಹರವಾಗಿ ಕಾಣುವ ಸ್ಥಳವನ್ನು ನೋಡಿದರೆ, ಸ್ವರ್ಗವೇ ಭೂಮಿಗೆ ಇಳಿದು ಬಂದಂತಿದೆ ಎಂದು ಭಾಸವಾಗುತ್ತದೆ. ಸಮುದ್ರಮಟ್ಟಕ್ಕಿಂತ ಎರಡು ಸಾವಿರ ಅಡಿ ಎತ್ತರವಿರುವ ದೇವರಮನೆ ಪ್ರದೇಶದಲ್ಲಿ ಸರಿದಾಡುವ ಮೋಡಗಳು ನಿಮ್ಮ ಕೈಗೆಟಕುವ ಎತ್ತರದಲ್ಲಿರುವಂತೆ ಅನಿಸುತ್ತದೆ. ಅಗೋ, ಅಲ್ಲಿ ದೂರದಲ್ಲಿ ಹರಿಯುತ್ತಿರುವ ಝರಿಗಳನ್ನು ನೋಡಿ. ಬೆಟ್ಟದಿಂದ ಹಾಲು ಹರಿಯುತ್ತಿರುವಂತೆ ಕಾಣುತ್ತದೆ.

ಇಂಥ ಮನಮೋಹಕ ಪ್ರದೇಶವಾಗಿರುವ ದೇವರಮನೆಯಲ್ಲಿ ಸುಮಾರು 1,400 ವರ್ಷಗಳ ಹಿಂದೆ ಕಾಲಭೈರವೇಶ್ವರ ಮಂದಿರ ನಿರ್ಮಾಣಗೊಂಡಿದೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದ್ದೇಯಾದರೆ, ಚೋಳ ಸಾಮ್ರಾಜ್ಯದ ಅರಸ ಬಲಾಢ್ಯ ರಾಯ ಈ ದೇವಸ್ಥಾನ ಕಟ್ಟಿಸಿದನೆಂಬ ಬಗ್ಗೆ ಮಾಹಿತಿ ಸಿಗುತ್ತದೆ.

ಹಾಗೆಯೇ ಈ ಪ್ರದೇಶದ ಪೌರಾಣಿಕ ಹಿನ್ನೆಲೆಯನ್ನು ನಾವು ಗಮನಿಸಿದ್ದೇಯಾದರೆ, ಇದು ಮೊದಲಿಗೆ ದಟ್ಟಕಾಡಾಗಿತ್ತು. ಪರಶಿವನು ಇಲ್ಲಿ ಕಾಲಿಟ್ಟ ನಂತರ ಬೆಂಗಾಡು ಹೀಗೆ ಪರಿವರ್ತನೆಗೊಂಡು ದೇವರಮನೆ ಅನಿಸಿಕೊಂಡಿತು. ಇಲ್ಲಿರುವ ದೇವಸ್ಥಾನದ ಪ್ರಸಿದ್ಧಿ ಹೇಗಿದೆಯೆಂದರೆ, ಚಿಕ್ಕಮಗಳೂರು ಮತ್ತು ಪಕ್ಕದ ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆನೇಕ ಕುಟುಂಬಗಳಿಗೆ ದೇವರ ಮನೆ ಭೈರವೇಶ್ವರನೇ ಮನೆ ದೇವರು.

ಲಗ್ನ ಆಗಬೇಕೆಂದಿರುವರು ಮತ್ತು ಸಂತಾನ ಬಯಸುತ್ತಿರುವವರಿಗೆ ಈ ದೇವಸ್ಥಾನದ ಭೇಟಿ ಫಲಪ್ರದವಾಗುತ್ತದಂತೆ. ಉಗಾದಿ ಹಬ್ಬದ ಸಂದರ್ಭದಲ್ಲಿ ಸಹಸ್ರಾರು ಭಕ್ತರು ದೇವರಮನೆಗೆ ಭೇಟಿ ನೀಡಿ ಪೂಜೆ ಪುನಸ್ಕಾರ ನಡೆಸುತ್ತಾರೆ.

ಇದನ್ನೂ ಓದಿ:  ಯೂಟ್ಯೂಬ್​​ನಲ್ಲಿ ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಪಾಲಕರಿಗೆ ಗೊತ್ತಾಗದಂತೆ ನಿಭಾಯಿಸಿದ ರೀತಿ ನಿಜಕ್ಕೂ ಶಾಕಿಂಗ್​​