ಶಾಮಿ ಸಂಸ್ಥೆಯು ರೆಡ್ಮಿ ನೋಟ್ 11 ಸರಣಿಯ ಮೂರು ಆವೃತ್ತಿಗಳನ್ನು ಚೀನಾನಲ್ಲಿ ಗುರುವಾರ ಲಾಂಚ್ ಮಾಡಿದೆ
ರೆಡ್ಮಿ ನೋಟ್ 11 5ಜಿ ಪೋನನ್ನು ರೆಡ್ಮಿ 11 ಪ್ರೊ ಮತ್ತು ರೆಡ್ಮಿ ನೋಟ್ 11 ಪ್ರೊ+ ಗಳೊಂದಿಗೆ ತುಲನೆ ಮಾಡಿದಾಗ ಮೂರು ಫೋನ್ ಗಳಲ್ಲಿ ಒಂದಷ್ಟು ವ್ಯತ್ಯಾಸಗಳು ಮತ್ತು ಹೋಲಿಕೆಗಳು ಕಂಡು ಬಂದಿವೆ.
ರೆಡ್ಮಿ ನೋಟ್ 11, ರೆಡ್ಮಿ ನೋಟ್ 11 ಪ್ರೊ ಮತ್ತು ರೆಡ್ಮಿ ನೋಟ್ 11 ಪ್ರೊ+ ಸ್ಮಾರ್ಟ್ಫೋನ್ಗಳನ್ನು ಚೀನಾನಲ್ಲಿ ಇದಕ್ಕೆಂದೇ ಮೀಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಗುರುವಾರ ಲಾಂಚ್ ಮಾಡಲಾಗಿದೆ. ರೆಡ್ಮಿ ನೋಟ್ 11 ಪ್ರೋ+ ಎಲ್ಲಕ್ಕಿಂತ ಪ್ರೀಮಿಯಂ ಮಾದರಿಯಾಗಿದ್ದು ಮಿಡಿಯಾಟೆಕ್ ಡೈಮೆನ್ಸಿಟಿ 920 ಎಸ್ಒಸಿ ಯಿಂದ ಚಾಲಿತವಾಗಿದೆ. ಇದು 120 ಡಬ್ಲ್ಯು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 4,500 ಎಮ್ ಎ ಎಚ್ ಬ್ಯಾಟರಿಯೊಂದಿಗೆ ಬರುತ್ತದೆ. ಮತ್ತೊಂದೆಡೆ, ರೆಡ್ಮಿ ನೋಟ್ 11 ಪ್ರೊ, 67 ಡಬ್ಲ್ಯು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,160 ಎಮ್ಎ ಎಚ್ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ರೆಡ್ಮಿ 11 5G ಮೂರು ಮಾದರಿಗಳಲ್ಲಿ ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಲಭ್ಯವಿದೆ ಎಂದು ಶಾಮಿ ಹೇಳಿಕೊಂಡಿದೆಯಲ್ಲದೆ ಆದಷ್ಟು ಬೇಗ ಈ ಫೋನ್ಗಳು ಭಾರತದಲ್ಲೂ ಲಭ್ಯವಾಗಲಿವೆ ಎಂದು ಹೇಳಿದೆ.
ರೆಡ್ಮಿ ನೋಟ್ 11 5ಜಿ ಪೋನನ್ನು ರೆಡ್ಮಿ 11 ಪ್ರೊ ಮತ್ತು ರೆಡ್ಮಿ ನೋಟ್ 11 ಪ್ರೊ+ ಗಳೊಂದಿಗೆ ತುಲನೆ ಮಾಡಿದಾಗ ಮೂರು ಫೋನ್ ಗಳಲ್ಲಿ ಒಂದಷ್ಟು ವ್ಯತ್ಯಾಸಗಳು ಮತ್ತು ಹೋಲಿಕೆಗಳು ಕಂಡು ಬಂದಿವೆ.
ಬೆಲೆಯನ್ನು ನೋಡಿದ್ದೇಯಾದಲ್ಲಿ 4ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಆವೃತ್ತಿಯ ರೆಡ್ಮಿ ನೋಟ್ 11 5ಜಿ ಭಾರತದಲ್ಲಾದರೆ ಸುಮಾರು 14,000 ರೂ. ಗಳಿಗೆ ಸಿಗುತ್ತದೆ. ಈ ಫೋನ್ 6ಜಿಬಿ + 128ಜಿಬಿ, 8ಜಿಬಿ+128ಜಿಬಿ ಮತ್ತು 8ಜಿಬಿ+ 256ಜಿಬಿ ಮಾಡೆಲ್ ಗಳಲ್ಲೂ ಲಭ್ಯವಿದ್ದು ಅವು ಭಾರತದಲ್ಲಿ ಕ್ರಮವಾಗಿ ಸುಮಾರು ರೂ. 16,400, ರೂ. 18,700 ಮತ್ತು ರೂ 21,100 ಗಳಿಗೆ ಸಿಗುತ್ತವೆ. ರೆಡ್ಮಿ ನೋಟ್ 5ಜಿ ಮೂರು ಬಣ್ಣಗಳಲ್ಲಿ ಬರುತ್ತದೆ ಮಿಸ್ಟೀರಿಯಸ್ ಬ್ಲ್ಯಾಕ್, ಮಿಲ್ಕಿ ವೇ ಬ್ಲ್ಯೂ ಮತ್ತು ಮಿಂಟ್ ಗ್ರೀನ್.
ಇದನ್ನೂ ಓದಿ: Viral Video: ಬೆಂಗಳೂರು ಏರ್ಪೋರ್ಟ್ನಲ್ಲಿ ಕಂಡ ಸೈನಿಕರಿಗೆ ಸಲ್ಯೂಟ್ ಮಾಡಿದ 4 ವರ್ಷದ ಬಾಲಕ; ವಿಡಿಯೋ ವೈರಲ್