ತ್ರಿಷಾ ಕೃಷ್ಣನ್ ಕನ್ನಡದಲ್ಲಿ ನಟಿಸಿದ್ದು ಒಂದೇ ಚಿತ್ರ, ಅದರಲ್ಲಿ ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದರು!
ಶುಕ್ರವಾರದಂದು ಅಕಾಲಿಕ ಮತ್ತು ದುರಂತ ಮರಣವನ್ನಪ್ಪಿದ ಪುನೀತ್ ರಾಜ್ಕುಮಾರ್ ನಾಯಕರಾಗಿ ಅಭಿನಯಿಸಿದ್ದ ‘ಪವರ್’ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿದ್ದರು. ಪುನೀತ್ ಅವರ ‘ದ್ವಿತ್ವ’ ಚಿತ್ರದಲ್ಲಿ ಅವರೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಘೋಷಣೆಯಾಗಿತ್ತು.
ದಕ್ಷಿಣ ಭಾರತದ ಹೆಸರಾಂತ ನಟಿ ತ್ರಿಷಾ ಕೃಷ್ಣನ್ ಪಕ್ಕಾ ಅಮ್ಮನ ಮಗಳು ಅಂದರೆ ತಪ್ಪಾಗಲಾರದು. ಉಮಾ ಕೃಷ್ಣನ್ ಮತ್ತು ತ್ರಿಷಾ ಪರಸ್ಪರ ಅಗಲಿರಲಾರರು. ತ್ರಿಷಾ ದೇಶದ ಯಾವುದೇ ಮೂಲೆಯಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿರಲಿ ಅವರೊಂದಿಗೆ ಉಮಾ ಇರಲೇಬೇಕು. ತಾಯಿಯೊಂದಿನ ಬಾಂಧವ್ಯದ ಬಗ್ಗೆ ಅವರು ಬಾವುಕರಾಗಿ ಮಾತಾಡುತ್ತಾರೆ. ‘ನನ್ನ ಬದುಕು, ಆತ್ಮ ಸ್ಥೈರ್ಯ ಮತ್ತು ಆತ್ಮವಿಶ್ವಾಸದ ಆಧಾರ ಸ್ತಂಭವೇ ನನ್ನಮ್ಮ. ನನ್ನ ಬದುಕಿನ ಪ್ರತಿಯೊಂದು ಏಳುಬೀಳುನಲ್ಲಿ ಅಮ್ಮ ಜೊತೆಗಿದ್ದಾರೆ. ಸಿನಿಮಾ ಉದ್ಯಮದಲ್ಲಿರುವ ಎಲ್ಲರಿಗೆ ನಮ್ಮ ಬಾಂಧವ್ಯದ ಬಗ್ಗೆ ಗೊತ್ತಿದೆ. ಅವರನ್ನ ಬಿಟ್ಟು ನಾನಿರಲಾರೆ ನನ್ನ ಬಿಟ್ಟು ಅವರಿರಲಾರರು,’ ಅಂತ ಒಮ್ಮೆ ತ್ರಿಷಾ ಹೇಳಿದ್ದರು.
ಪ್ರಾಯಶಃ ಇದೇ ಕಾರಣಕ್ಕೆ ಅವರು ಇನ್ನೂ ಮದುವೆಯಾಗದೆ ಉಳಿದಿರಬಹುದೇನೋ? ಹಾಗೆ ನೋಡಿದರೆ 2015ರ ಜನೆವರಿಯಲ್ಲಿ ಅವರ ನಿಶ್ಚಿತಾರ್ಥ ವರುಣ್ ಮಣಿಯನ್ ಹೆಸರಿನ ಚೆನೈ ಮೂಲದ ಬಿಸಿನೆಸ್ಮನ್ ಜೊತೆ ಆಗಿತ್ತು. ಆದರೆ, ಕೆಲವೆ ತಿಂಗಳು ಬಳಿಕ ಅವರು ತಮ್ಮ ನಿಶ್ಚಿತಾರ್ಥ ಮುರಿದಿದೆ ಅಂತ ಫೋಷಣೆ ಮಾಡಿದ್ದರು.
ಓಕೆ, ತ್ರಿಷಾ ಸಾಂಪ್ರದಾಯಿಕ ಚೆಲುವಿನ ಒಡತಿ ಹಾಗಾಗಿ ಅವರಿಗೆ ಟ್ರೆಡಿಶನಲ್ ಉಡುಗೆಗಳು ಚೆನ್ನಾಗಿ ಒಪ್ಪುತ್ತವೆ. ತಮಿಳು ಮತ್ತು ತೆಲುಗು ಚಿತ್ರಗಳಲ್ಲೇ ಜಾಸ್ತಿ ನಟಿಸುವ ಅವರು ಒಂದು ಕನ್ನಡ ಮತ್ತೊಂದು ಹಿಂದಿ ಸಿನಿಮಾನಲ್ಲಿ ನಟಿಸಿದ್ದಾರೆ. ಶುಕ್ರವಾರದಂದು ಅಕಾಲಿಕ ಮತ್ತು ದುರಂತ ಮರಣವನ್ನಪ್ಪಿದ ಪುನೀತ್ ರಾಜ್ಕುಮಾರ್ ನಾಯಕರಾಗಿ ಅಭಿನಯಿಸಿದ್ದ ‘ಪವರ್’ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿದ್ದರು. ಪುನೀತ್ ಅವರ ‘ದ್ವಿತ್ವ’ ಚಿತ್ರದಲ್ಲಿ ಅವರೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಘೋಷಣೆಯಾಗಿತ್ತು. ಅವರು ನಾಯಕಿಯಾಗಿ ನಟಿಸಿದ ಹಿಂದಿ ಚಿತ್ರ ‘ಖಟ್ಟಾ ಮೀಠಾ’ ನಲ್ಲಿ ಅಕ್ಷಯ ಕುಮಾರ್ ನಾಯಕನಾಗಿದ್ದರು.
ತ್ರಿಷಾ ಸಿನಿಮಾಗಳಲ್ಲಿ ಕೆಲಸ ಮಾಡಲಾರಂಭಿಸಿ 22 ವರ್ಷಗಳಾಗಿದೆ ಅಂದರೆ ನಂಬುತ್ತೀರಾ? ಅವರ ಮೊದಲ ಚಿತ್ರ ಜೋಡಿ 1999ರಲ್ಲಿ ಬಿಡುಗಡೆಯಾಗಿತ್ತು. ಅಂದಹಾಗೆ, ತ್ರಿಷಾಗೆ ಈಗ 38ರ ಪ್ರಾಯ.
ಇದನ್ನೂ ಓದಿ: Bhajarangi 2: ಶಿವಣ್ಣನ ಭಜರಂಗಿ 2 ಚಿತ್ರಕ್ಕೆ ಅಲ್ಲು ಅರ್ಜುನ್ ವಿಶ್; ವಿಡಿಯೋ ವೈರಲ್