ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

Updated on: Dec 22, 2025 | 9:01 PM

20 ವರ್ಷದ ಸಿದ್ಧರಾಜ್ ಸಿಂಗ್ ಮಹೀದ ಅವರು ನಾಂದೇಸರಿ ಸೇತುವೆಯ ಮೇಲೆ ಹೋಗುತ್ತಿದ್ದಾಗ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಆದರೆ, ಅದೃಷ್ಟವಶಾತ್ ಈ ಭೀಕರ ಅಪಘಾತದಿಂದ ಅವರು ಬದುಕುಳಿದಿದ್ದಾರೆ. ಅವರು ಸೇತುವೆಯಿಂದ ಕೆಳಗೆ ಬೀಳುವಾಗ ಅವರ ಶರ್ಟ್​ ಲೈಟ್ ಕಂಬಕ್ಕೆ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ ಅವರು 20 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ತಕ್ಷಣ ಅವರನ್ನು ಮೇಲಕ್ಕೆ ಎಳೆದುಕೊಂಡು ಕಾಪಾಡಿದ್ದಾರೆ. ಬೈಕ್ ಸೇತುವೆಯಿಂದ ನೀರಿಗೆ ಬಿದ್ದರೂ ಆ ಯುವಕನ ಆಯುಷ್ಯ ಗಟ್ಟಿ ಇದ್ದುದರಿಂದ ಯಾವುದೇ ಗಾಯಗಳೂ ಆಗದೆ ಅವರು ಬದುಕುಳಿದಿದ್ದಾರೆ.

ವಡೋದರಾ, ಡಿಸೆಂಬರ್ 22: ವಡೋದರಾದಲ್ಲೊಂದು ಪವಾಡದಂತಹ ಘಟನೆ ನಡೆದಿದೆ. 20 ವರ್ಷದ ಸಿದ್ಧರಾಜ್ ಸಿಂಗ್ ಮಹೀದ ಅವರು ನಾಂದೇಸರಿ ಸೇತುವೆಯ ಮೇಲೆ ಹೋಗುತ್ತಿದ್ದಾಗ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಆದರೆ, ಅದೃಷ್ಟವಶಾತ್ ಈ ಭೀಕರ ಅಪಘಾತದಿಂದ (Accident) ಅವರು ಬದುಕುಳಿದಿದ್ದಾರೆ. ಅವರು ಸೇತುವೆಯಿಂದ ಕೆಳಗೆ ಬೀಳುವಾಗ ಅವರ ಶರ್ಟ್​ ಲೈಟ್ ಕಂಬಕ್ಕೆ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ ಅವರು 20 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ತಕ್ಷಣ ಅವರನ್ನು ಮೇಲಕ್ಕೆ ಎಳೆದುಕೊಂಡು ಕಾಪಾಡಿದ್ದಾರೆ. ಬೈಕ್ ಸೇತುವೆಯಿಂದ ನೀರಿಗೆ ಬಿದ್ದರೂ ಆ ಯುವಕನ ಆಯುಷ್ಯ ಗಟ್ಟಿ ಇದ್ದುದರಿಂದ ಯಾವುದೇ ಗಾಯಗಳೂ ಆಗದೆ ಅವರು ಬದುಕುಳಿದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ