Calligraphy: ವಾರಣಾಸಿಯಲ್ಲಿ ಗಂಗಾಜಲದಿಂದ ತಯಾರಿಸಿದ ಶಾಯಿಯಿಂದ ಬಟ್ಟೆ ಮೇಲೆ ಭಗವದ್ಗೀತೆ ಬರೆದಿರೋದು ಒಬ್ಬ ಮುಸ್ಲಿಂ ಕಲಾವಿದ!
ಜವಳಿ ವರ್ತಕನಾಗಿರುವ ಇರ್ಷಾದ್ ಅವರಿಗೆ ಕಾಟನ್ ಬಟ್ಟೆಯ ಮೇಲೆ ಪವಿತ್ರ ಕುರಾನ್ ಬರೆಯಲು 4-ವರ್ಷ ಸಮಯ ಹಿಡಿದಿತ್ತಂತೆ. ಕಲೆಯನ್ನು ಅವರು ತಮ್ಮ ಪೂರ್ವಿಕರಿಂದ ಕಲಿತಿದ್ದು ನಿಜವಾದರೂ ಅದನ್ನು ಜೀವಂತವಾಗಿಡಲು ಯುವಪೀಳಿಗೆಯಿಂದ ಪ್ರೇರಣೆ ಸಿಗುತ್ತಿದೆ ಎಂದು ಹೇಳುತ್ತಾರೆ.
ವಾರಣಾಸಿ (ಉತ್ತರ ಪ್ರದೇಶ): ಧಾರ್ಮಿಕ ನಗರ ವಾರಣಾಸಿಯಲ್ಲಿ (Varanasi) ಗಂಗಾ-ಜಮುನಿ ತೆಹ್ಜೀಬ್ ನ (Ganga-Jamuni Tehzeeb) (ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ಸಮ್ಮಿಲನ) ಒಂದು ವಿನೂತನ ಉದಾಹರಣೆ ಮುನ್ನೆಲೆಗೆ ಬಂದಿದೆ. ಹಾಜಿ ಇರ್ಷಾದ್ ಅಲಿ ಬನಾರಸಿ (Haji Irshad Ali Banarsi) ಹೆಸರಿನ ಕಲಾವಿದರೊಬ್ಬರು ಹತ್ತಿಯ ಬಟ್ಟೆಯ ಮೇಲೆ ಗಂಗಾತಟದ ಮಣ್ಣು ಮತ್ತು ನೀರಿನಿಂದ ತಯಾರಿಸಿದ ಶಾಯಿ (ink) ಬಳಸಿ ಭಗವದ್ಗೀತೆಯನ್ನು ರಚಿಸಿದ್ದಾರೆ.
‘ಇಲ್ನೋಡಿ ಇದು ಗಂಗಾನದಿ ತೀರದ ಮಣ್ಣು ಮತ್ತು ನೀರು ಅದೇ ಪವಿತ್ರ ನದಿಯಿಂದ ತಂದಿರೋದು. ಶಾಯಿ ತಯಾರಿಸಲು ನಾನು ತಿನ್ನಲು ಯೋಗ್ಯ ಅಂಟನ್ನು (ಗೋಂದು) ಬಳಸಿದ್ದೇನೆ. ಇಲ್ಲಿ ನಾನು ಉಪಯೋಗಿಸಿರೋದು ಶತ ಪ್ರತಿಶತ ಹತ್ತಿ ಬಟ್ಟೆ,’ ಎಂದು ಕಲಾವಿದ ಹಾಜಿ ಇರ್ಷಾದ್ ಅಲಿ ಬನಾರಸಿ ಹೇಳುತ್ತಾರೆ.
ಇದನ್ನೂ ಓದಿ: Mango-Ginger Lemonade Recipe: ಮಾವು, ಶುಂಠಿ, ನಿಂಬೆ ಪಾನಕ ಬೇಸಿಗೆಯಲ್ಲಿ ದೇಹಕ್ಕೆ ಈ ಎಲ್ಲ ಆರೋಗ್ಯ ನೀಡುತ್ತದೆ
ಹಾಜಿ ಇರ್ಷಾದ್ ಅಲಿ ಬನಾರಸಿ ಈ ಕಲೆಯನ್ನು ತಮ್ಮ ಪೂರ್ವಜರಿಂದ ಕಲಿತಿದ್ದಾರೆ. ಅವರೆಲ್ಲ ಕಾಟನ್ ಬಟ್ಟೆಯ ಮೇಲೆ ಬರೆಯಲು ಪೆನ್ ಗಳ ರೂಪದಲ್ಲಿ ಗಿಡಗಳ ಬೇರು ಬಳಸುತ್ತಿದ್ದರಂತೆ. ಹದಿಹರೆಯದಿಂದಲೇ ಹಾಜಿ ಇರ್ಷಾದ್ ತಮ್ಮನ್ನು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
‘ಕ್ಯಾಲಿಗ್ರಾಫಿಯನ್ನು ನನ್ನ ಪೂರ್ವಿಕರು ಅಭ್ಯಾಸ ಮಾಡುತ್ತಿದ್ದರು. 1992 ರಲ್ಲಿ ಇನ್ನೂ ಜೀವಂತವಾಗಿದ್ದ ನನ್ನ ಚಿಕ್ಕಪ್ಪ ಹೀಗೆ ಬರೆಯುತ್ತಿದ್ದರು. ಅವರಿಗೆ 80ಕ್ಕಿಂತ ಹೆಚ್ಚು ವಯಸ್ಸಾಗಿದ್ದರಿಂದ ಅವರ ಕೈ ನಡುಗಲಾರಂಭಿಸಿದ್ದವು. ಅವರ ಕೆಲಸವನ್ನು ನಾನು ಕೈಗೆತ್ತಿಕೊಂಡೆ. ಅವರು ಗತಿಸಿದ ಬಳಿಕ ಏಕಾಂಗಿಯಾಗಿ ಇದನ್ನು ಮಾಡುತ್ತಿದ್ದೇನೆ,’ ಎಂದು ಇರ್ಷಾದ್ ಹೇಳುತ್ತಾರೆ.
ಒಬ್ಬ ಜವಳಿ ವರ್ತಕನಾಗಿರುವ ಇರ್ಷಾದ್ ಅವರಿಗೆ ಕಾಟನ್ ಬಟ್ಟೆಯ ಮೇಲೆ ಪವಿತ್ರ ಕುರಾನ್ ಬರೆಯಲು 4-ವರ್ಷ ಸಮಯ ಹಿಡಿದಿತ್ತಂತೆ. ಕಲೆಯನ್ನು ಅವರು ತಮ್ಮ ಪೂರ್ವಿಕರಿಂದ ಕಲಿತಿದ್ದು ನಿಜವಾದರೂ ಅದನ್ನು ಜೀವಂತವಾಗಿಡಲು ಯುವಪೀಳಿಗೆಯಿಂದ ಪ್ರೇರಣೆ ಸಿಗುತ್ತಿದೆ ಎಂದು ಹೇಳುತ್ತಾರೆ.
‘ಸುಮಾರು 10-12 ವರ್ಷಗಳ ಹಿಂದೆ ನನ್ನ ಮಕ್ಕಳು, ಕಲೆಯನ್ನು ಜಿವಂತವಾಗಿಡಲು ನಾನು ಏನನ್ನಾದರೂ ಮಾಡಬೇಕು ಇಲ್ಲದೆ ಹೋದರೆ ನಮ್ಮ ಕುಟುಂಬ ಹೊರತಾಗಿ ಬೇರೆ ಯಾರಿಗೂ ಇದರ ಬಗ್ಗೆ ಗೊತ್ತಾಗುವುದಿಲ್ಲ ಎಂದು ಹೇಳಿದ್ದರು. ಅದು ನಶಿಸದ ಹಾಗೆ ಏನಾದರೂ ಮಾಡುವಂತೆ ಅವರು ಒತ್ತಾಯಿಸಿದರು,’ ಎಂದು ಇರ್ಷಾದ್ ಹೇಳುತ್ತಾರೆ.
ಹತ್ತಿ ಬಟ್ಟೆಯ ಮೇಲೆ ಗಂಗಾನದಿ ನೀರು ಮತ್ತು ಮಣ್ಣನ್ನು ಬಳಸಿ ಭಗವದ್ಗೀತೆಯನ್ನು ಬರೆಯಲು ಆರಂಭಿಸುವ ಮುನ್ನ ಇರ್ಷಾದ್ ಸಂಸ್ಕೃತ ಭಾಷೆಯನ್ನು ಕಲಿತರು ಮತ್ತು ಗೀತೆಯನ್ನು ಓದಿದರು. ಇದೇ ತೆರನಾಗಿ ಅವರು ಹತ್ತಿಬಟ್ಟೆಯ ಮೇಲೆ ಹನುಮಾನ್ ಚಲಿಸಾ ಮತ್ತು ಬೇರೆ ಧಾರ್ಮಿಕ ಪಠ್ಯಗಳನ್ನು ಸಹ ಬರೆದಿದ್ದಾರೆ. ಇರ್ಷಾದ್ ಅವರ ಮಕ್ಕಳಿಗೆ ತಮ್ಮ ತಂದೆಯ ಬಗ್ಗೆ ಭಾರೀ ಹೆಮ್ಮೆ, ಅಭಿಮಾನವಿದೆ.
ಇದನ್ನೂ ಓದಿ: Gas Prices: ಕೇಂದ್ರದ ಹೊಸ ಮಾರ್ಗಸೂಚಿ; ದೇಶಾದ್ಯಂತ ಗ್ಯಾಸ್ ಬೆಲೆ ಇಳಿಕೆ; ಬೆಂಗಳೂರು ಮೊದಲಾದೆಡೆ ಎಷ್ಟಿದೆ ದರ?
‘ಹಲವಾರು ಪೀಳಿಗೆಗಳಿಂದ ನಮ್ಮ ಪೂರ್ವಜರು ಮಾಡಿಕೊಂಡು ಬಂದಿರುವ ಮಣ್ಣು ಮತ್ತು ನೀರಿನಿದ ಶಾಯಿ ತಯಾರಿಸಿ ಬಟ್ಟೆಯ ಮೇಲೆ ಬರೆಯುವ ಕಲೆ ನಮ್ಮ ಪರಂಪರೆಯಾಗಿದೆ,’ ಎಂದು ಇರ್ಷಾದ್ ಮಗ ಮುಡಸ್ಸರ್ ಅಲಿ ಹೇಳುತ್ತಾನೆ.
ಕಲಾವಿದ ಇರ್ಷಾದ್ ಅಲಿ ತಮ್ಮ ಕೃತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತೋರಿಸುವ ಇಚ್ಛೆ ಹೊಂದಿದ್ದಾರೆ.
ಭಾರತದ ಸಂವಿಧಾನವನ್ನು ಇಂಗ್ಲಿಷ್ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಹೀಗೆ ಹತ್ತಿ ಬಟ್ಟೆಯ ಮೇಲೆ ಬರೆಯುವ ಉದ್ದೇಶ ಅವರಲ್ಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ